ಲೈಫ್ & ಸ್ಟೈಲ್

ತಪ್ಪು ಜೀವನಶೈಲಿ ತರುವ ಆರೋಗ್ಯ ಸಮಸ್ಯೆಗಳಿಂದ ದೀರ್ಘಕಾಲದ ಬಾಧೆ

ಮಾರಣಾಂತಿಕ ಕಾಯಿಲೆಗಳಾದ ಹೃದ್ರೋಗ ಹಾಗೂ ಸ್ಥನ ಕ್ಯಾನ್ಸರ್ ನಿಂದ ಪ್ರತಿ ವರ್ಷ ಸಾವಿರಾರು ಮಂದಿ ಅಸುನೀಗುತ್ತಿದ್ದಾರೆ. ಆದರೆ ತಕ್ಷಣ ಮಾರಣಾಂತಿಕವಲ್ಲದ ಆದರೆ ತಕ್ಷಣಕ್ಕೆ ಗುಣಪಡಿಸಲೂ ಆಗದ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಂದ ವರ್ಷಾನುಗಟ್ಟಲೇ ನರಳುವರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಏರುತ್ತಲೇ ಇದೆ. ಈ ಬಗ್ಗೆ ಅಮೇರಿಕದ ಗ್ಲೋಬಲ್ ಹೆಲ್ತ್ ಡಾಟಾ ಎಕ್ಸಚೇಂಜ್ ನಡೆಸಿದ dentist_36446_18919ಸಮೀಕ್ಷೆ ಪ್ರಕಾರ ವಯೋಸಹಜ ಕಾಯಿಲೆಗಳಲ್ಲದ ಹಲವಾರು ವಿಧದ ರೋಗಗಳಿಂದ ಸ್ತ್ರೀ ಪುರುಷರಿಬ್ಬರೂ ನರಳುತ್ತಾ ವರ್ಷಗಟ್ಟಲೇ ಜೀವನ ಸಾಗಿಸುವರು. ಈ ಬಗ್ಗೆ ಸಂಶೋಧನೆಯನ್ನು ನಡೆಸಿರುವ ಸಂಸ್ಥೆಯು ಮಾರಕೇತರ ಹಾಗೂ ವರ್ಷಾನುಗಟ್ಟಲೇ ನರಳಿಸುವ ರೋಗದ ಪಟ್ಟಿ ಮಾಡಿದೆ.
ಕುತ್ತಿಗೆನೋವು: ಮಾಯೋ ಕ್ಲಿನಿಕ್ ಪ್ರಕಾರ ತ್ವಚ್ಚೆಯ ಉರಿಯೂತ ಹಾಗೂ ಅಲರ್ಜಿ ಬಹಳ ಜನರಲ್ಲಿ ಸರ್ವೇಸಾಮಾನ್ಯವಾಗಿದ್ದು ಇದಕ್ಕೂ ಓಜೋ಼ನ್ ಪದರದ ಸಡಿಲಿಕೆ ಕಾರಣವೆಂದು ತಿಳಿಸಿದೆ. ಹಾಗೂ ತಪ್ಪು ಕ್ರಮದಲ್ಲಿ ಕುಳಿತುಕೊಳ್ಳುವುದರಿಂದ ಕುತ್ತಿಗೆ ಹಾಗೂ ಬೆನ್ನು ನೋವು ಅವರಿಸಲಿದು ಇದರಿಂದ ಶಕ್ತಿ ಇಲ್ಲದಂತಾಗಿ ಕೈ, ಭುಜ, ತೊಳುಗಳಲ್ಲಿ ಮರಗಟ್ಟಿದ ಅನುಭವ ಉಂಟಾಗುವುದು.
ಹಲ್ಲು ನೋವು: ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಇನ್ಫರ್ಮೆಷನ್ ಪ್ರಕಾರ ಚಿಕ್ಕ ವಯಸ್ಸಿಗೆ ಹಲ್ಲುದುರುವುದು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಆದರೆ ಹಲ್ಲಿನ ಸಮಸ್ಯೆಗಳು ಎಲ್ಲಾ ವಯಸ್ಸಿನವರಲ್ಲಿಯೂ ಗಂಭೀರ ಕಾಯಿಲೆಯಾಗಿದೆ ಕಾಡುತ್ತಿದೆ.
ಒತ್ತಡ: ಮಾರಣಾಂತಿಕ ಕಾಯಿಲೆಯಲ್ಲದ ಒತ್ತಡವು ಮನುಷ್ಯನನ್ನು ಇಷ್ಟಿಷ್ಟೇ ತಿಂದು ಮುಗಿಸುವುದು ಇದರಿಂದ ಹಲವಾರು ಕಾಯಿಲೆಗಳು ದೇಹದ ಮೇಲೆ ದಾಳಿ ನಡೆಸಿ ಶಕ್ತಿಯನ್ನು ಕುಂದಿಸಿ ನಿಶ್ಶಕ್ತಿಯನ್ನುಂಟು ಮಾಡಿ ಜೀವನದ ಚೈತನ್ಯವನ್ನೇ ಕಸಿಯುವುದು.
ಸಂಧಿವಾತ: ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಿಂದ ಹಿಡಿದು ವಯೋವೃದ್ಧರವರೆಗೂ ಕಾಡುವ ಸಂಧಿವಾತವೂ ಸಾಮಾನ್ಯವಾಗಿ ಕುತ್ತಿಗೆ, ಕೈ, ಮೊಣಕಾಲು, ಸೊಂಟದಲ್ಲಿ ತೀವ್ರತರವಾದ ಸೆಳೆತ ನೋವು ನೀಡಿ ಜೀವನದಲ್ಲಿ ಜಿಗುಪ್ಸೆ ಮೂಡಿಸುವುದು. ಅಸ್ಥಿ ಸಂಧಿವಾತವು ಅನುವಂಶಿಕವಾಗಿ ಬರಲಿದ್ದು ದೇಹದ ತೂಕ ಹೆಚ್ಚುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸುವುದು.
ಕಿವುಡುತನ: ವಯೋವೃದ್ಧರಲ್ಲಿ ಸಹಜವಾಗಿ ಕಂಡು ಬರುವ ಕಿವುಡುತನ. ಅತಿಯಾದ ಶಬ್ಧಮಾಲಿನ್ಯ ಅಥವಾ ಅಪಘಾತವಾದಾಗ.

ಕಿವಿಯೊಳಗೆ ರಕ್ತ ಸ್ರಾವ, ಮಧುಮೇಹದಂತ ರೋಗದಿಂದಲೂ ಕಿವುಡುತನ ಕಾಡಲಿದೆ. ಇಂತಹ ಸಮಸ್ಯೆಯೂ ಸಾಮಾಜಿಕವಾಗಿ ನರಳಿಸಿ ಖಿನ್ನತೆಗೊಳಪಡುವಂತೆ ಮಾಡುವುದು.
ಮೈಗ್ರೇನ್: ಶೇ. 90ರಷ್ಟು ಮಂದಿಗೆ ಮೈಗ್ರೇನ್ ಇರುವುದನ್ನು ಮೈಗ್ರೇನ್ ಸಂಶೋಧನಾ ಸಂಸ್ಥೆಯು ದೃಢಪಡಿಸಿದೆ. ಇದು ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಗಳು ಹೆಚ್ಚಿವೆ. ಸಹಿಸಲು ಅಸಾಧ್ಯವಾದ ತಲೆಯ ಸ್ನಾಯುಗಳ ನೋವಿನಿಂದ ಮನುಷ್ಯ ನಲುಗಿ ಹೋಗುವನು.
osteoarthritis_36438_18919ಖಿನ್ನತೆ: ಇತ್ತೀಚಿನ ದಿನಗಳಲ್ಲಿ ಹದಿಹರೆಯವರದಲ್ಲಿ ಅತಿ ಹೆಚ್ಚಾಗಿ ಖಿನ್ನತೆ ಕಾಡುವ ಸಮಸ್ಯೆಯಾಗಿದೆ. ಲಕ್ಷಣಗಳಾದ ಹಸಿವಾಗದೆ ಇರುವುದು, ಏಕಾಗ್ರತೆ ಕೊರತೆ, ನಿದ್ರಾಭಂಗ, ನೆನಪಿನ ಶಕ್ತಿ ಕುಂಠಿತವಾಗುವುದು. ಈ ಸಮಸ್ಯೆಯು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.
ಸೊಂಟ ನೋವು: ದೀರ್ಘ ಕಾಲ ಕುಳಿತೇ ಕೆಲಸ ಮಾಡುವವರಲ್ಲಿ ಇದು ಸಾಮಾನ್ಯ. ಕೆಲವರಿಗೆ ಶಸ್ತ್ರಚಿಕಿತ್ಸೆ ಮಾಡುವ ಅವಶ್ಯವೂ ಕಂಡುಬಂದಿದೆ.
ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆಯಿಂದ ಉಂಟಾಗುವ ತಡೆ ಮೂತ್ರ ರೋಗಕ್ಕೆ ಶೇ. 35 ರಿಂದ 40ರಷ್ಟು ಪುರುಷರು ನರಳುವರು ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದೆ.

Leave a Reply

comments

Related Articles

error: