ಮೈಸೂರು

ತಲಕಾಡು ನದಿ ತೀರದಲ್ಲಿ ಹೆಣ ಸುಡುತ್ತಿರುವುದರ ವಿರುದ್ಧ ಅಗತ್ಯ ಕ್ರಮ: ಡಿ.ರಂದೀಪ್

ಮೈಸೂರು,ಜು.3-ತಲಕಾಡು ನದಿ ತೀರದಲ್ಲಿ ಶವ ಸುಡುತ್ತಿರುವ ವಿಚಾರ ನನಗೆ ತಿಳಿದಿರಲಿಲ್ಲ. ಈಗ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

ಮುಂದೆ ಆ ಸ್ಥಳದಲ್ಲಿ ಹೆಣ ಸುಡಲು ಬಿಡುವುದಿಲ್ಲ. ಆ ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೋಗಲಾಗುವುದು. ಮುಂದೆ ಇಂತಹ ಕೃತ್ಯ ನಡೆಯದಂತೆ ಕ್ರಮ ಕೈಗೊಳ್ಳುವಂತೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಈಗಾಗಲೇ ತಹಸಿಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಉತ್ತರ ಭಾರತದಲ್ಲಿ ಗಂಗಾ ನದಿಯಂತೆ ದಕ್ಷಿಣ ಭಾರತದಲ್ಲಿ ಕಾವೇರಿ ನದಿ ತೀರದಲ್ಲಿ ಈ ಕೃತ್ಯ ನಡೆದಿದ್ದು, ಆ ಜನಾಂಗದವರಿಗೆ ಹೆಣ ಸುಡಲು ಪ್ರತ್ಯೇಕ ಸ್ಥಳ ಹುಡುಕಲಾಗುವುದು ಎಂದು ತಿಳಿಸಿದ್ದಾರೆ. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: