ದೇಶಪ್ರಮುಖ ಸುದ್ದಿ

ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಾಲಯದಲ್ಲಿ 8 ವಜ್ರಗಳು ನಾಪತ್ತೆ

ತಿರುವನಂತಪುರಂ, ಜುಲೈ 3 : ಕೇರಳದ ಪ್ರಸಿದ್ಧ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದಲ್ಲಿದ್ದ ಅತ್ಯಂತ ಪ್ರಾಚೀನವಾದ 8 ವಜ್ರಗಳು ಕಾಣೆಯಾಗಿವೆ ಎಂದು ತಿಳಿದು ಬಂದಿದೆ. ದೇವರ ವಿಗ್ರಹಕ್ಕೆ ತೊಡಿಸಲಾಗಿದ್ದ ವಜ್ರಗಳನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಕೇರಳ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನಂತ ಪದ್ಮನಾಭ ದೇವಾಲಯ ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇವಸ್ಥಾನ ಎನಿಸಿಕೊಂಡಿದ್ದು, ಇಲ್ಲಿರುವ ನಿಧಿಯ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. 10 ತಿಂಗಳುಗಳ ಹಿಂದೆ ಈ ದೇವಾಲಯದಲ್ಲಿದ್ದ 189 ಕೋಟಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಈಗ ಕಳವಾಗಿರುವ ವಜ್ರಗಳ ಮೌಲ್ಯ 21 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆದರೆ ಪುರಾತನ ವಜ್ರಗಳಾದ ಅವುಗಳ ಮೌಲ್ಯ ಇನ್ನೂ ಅಧಿಕ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಬಗ್ಗೆ ಮೊದಲಿನಿಂದಲೂ ಅನುಮಾನಗಳು ವ್ಯಕ್ತವಾಗಿದ್ದು, 2009 ರಲ್ಲಿಯೇ ದೇವಾಲಯದ ಆಸ್ತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ಬಗ್ಗೆ ದೂರುಗಳು ದಾಖಲಾಗಿವೆ.
-ಎನ್.ಬಿ.

Leave a Reply

comments

Related Articles

error: