ದೇಶಪ್ರಮುಖ ಸುದ್ದಿ

ಅನಗತ್ಯ ಪಿಐಎಲ್‍ : ಟಿ.ಜೆ. ಅಬ್ರಾಹಾಮ್‍ಗೆ 25 ಲಕ್ಷ ರೂ. ದಂಡ

ಬೆಂಗಳೂರು, ಜುಲೈ 3 : ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಅವರು ಅನಗತ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕೋರ್ಟ್‍ ಸಮಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸುಪ್ರೀಮ್‍ಕೋರ್ಟ್ ಬರೋಬ್ಬರಿ 25 ಲಕ್ಷ ರೂ. ದಂಡ ವಿಧಿಸಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಉದ್ದೇಶಿತ ಮಿನಿ ವಿಧಾಸೌಧ ಸ್ಥಳಾಂತರ ಸಂಬಂಧ ಟಿ.ಜೆ ಅಬ್ರಾಹಂ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಎ.ಎಂ. ಖನ್ವಿಲ್ಕರ್ ಅವರಿದ್ದ ಪೀಠವು ಮಿನಿ ವಿಧಾನಸೌಧ ಸ್ಥಳಾಂತರ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವಲ್ಲ ಎಂದು ಅರ್ಜಿ ವಜಾಗೊಳಿಸಿದೆ. ಜೊತೆಗೆ ಅನಗತ್ಯವಾಗಿ ಪಿಐಎಲ್ ಸಲ್ಲಿಸಿ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಿದ್ದೀರಿ ಎಂದು ವ್ಯಾಖ್ಯಾನ ಮಾಡಿರುವ ಕೋರ್ಟ್‍, 25 ಲಕ್ಷ ರೂ. ದಂಡ ವಿಧಿಸಿದ್ದು ಎರಡು ವಾರದೊಳಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್‍ಗೆ ಹಣ ಪಾವತಿಸುವಂತೆ ಆದೇಶ ನೀಡಿದೆ.
-ಎನ್‍.ಬಿ.

Leave a Reply

comments

Related Articles

error: