ಸುದ್ದಿ ಸಂಕ್ಷಿಪ್ತ

ಅರ್ಜಿ ಆಹ್ವಾನ

ಮಡಿಕೇರಿ ಜು.03:-ಸಂಸ್ಕೃತಿ ಕಾಲೇಜ್ ಆಫ್ ವಿಜ್ಯುಯಲ್ ಅಂಡ್ ಪರ್ಫಾಮಿಂಗ್ ಆಟ್ರ್ಸ್ ವತಿಯಿಂದ ಒಂದು ವರ್ಷದ ನಾಟಕ ಕಲೆ ಡಿಪ್ಲೊಮಾಗೆ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯ,  ಅಧಿಕೃತ  ಮಾನ್ಯತೆ ಪಡೆದ ಹುಬ್ಬಳ್ಳಿಯ ಸಂಸ್ಕೃತಿ ಕಾಲೇಜ್ ಆಫ್ ವಿಜ್ಯುಯಲ್ ಅಂಡ್ ಪರ್ಫಾಮಿಂಗ್ ಆಟ್ರ್ಸ್‍ನ ನಾಟಕ ಕಲೆ ಡಿಪ್ಲೊಮಾ ವಿಭಾಗವು 2017-18ನೇ ಸಾಲಿಗೆ ಅರ್ಜಿ ಆಹ್ವಾನಿಸಿದ್ದು, ಕನಿಷ್ಠ ವಿದ್ಯಾರ್ಹತೆ ಪದವಿಪೂರ್ವ ಹಾಗೂ ಪದವೀಧರರಿಗೆ ಆದ್ಯತೆಯಿದೆ. 18 ರಿಂದ 30 ವರ್ಷದೊಳಗಿರಬೇಕು.

ಆಯ್ಕೆಯಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರಾಜ್ಯದ ಹಾಗೂ ಹೊರರಾಜ್ಯದ ತಜ್ಞರಿಂದ ಪಾಠ-ಪ್ರವಚನ ಹಾಗೂ ಪ್ರಯೋಗಗಳನ್ನು ನಡೆಸಿಕೊಡಲಾಗುತ್ತದೆ.   ಭರ್ತಿ ಮಾಡಿದ ಅರ್ಜಿಯನ್ನು “ಸಂಯೋಜಕಕರು”, ಸಂಸ್ಕೃತಿ ಕಾಲೇಜ್ ಆಫ್ ವಿಜ್ಯುಯಲ್ ಅಂಡ್ ಪರ್ಫಾಮಿಂಗ್ ಆಟ್ರ್ಸ್, ಮೂರನೇ ಮಹಡಿ, ವೆಂಕಟಗಿರಿ ಪ್ಲಾಜಾ, ಬ್ರ್ಯಾಂಡ್ ಫ್ಯಾಕ್ಟರಿ ಮೇಲೆ, ಗೋಕುಲ ರಸ್ತೆ, ಹುಬ್ಬಳ್ಳಿ-580030 ಈ ವಿಳಾಸಕ್ಕೆ ಕಳುಹಿಸಬಹುದು.

ಅರ್ಜಿ ಸಲ್ಲಿಸಲು ಜುಲೈ, 05 ಕೊನೆಯ ದಿನವಾಗಿದೆ. ಜುಲೈ, 7 ರಂದು ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ: 0836-2337111, ಮೊಬೈಲ್: 7022806440 ನ್ನು ಸಂಪರ್ಕಿಸಬಹುದು ಎಂದು ಸಂಸ್ಕೃತಿ ಕಾಲೇಜಿನ ಸಂಯೋಜಕರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: