ಮೈಸೂರು

ಅಡುಗೆ ತಯಾರಕರು, ಸಹಾಯಕರಿಗೆ ಪ್ರಾಯೋಗಿಕ ಪರೀಕ್ಷೆ

ಮೈಸೂರು, ಜು.೩: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಡುಗೆ ತಯಾರಕರು ಹಾಗೂ ಅಡುಗೆ ಸಹಾಯಕರ ನೇರ ನೇಮಕಾತಿಯ ಪ್ರಾಯೋಗಿಕ ಪರೀಕ್ಷೆ ಸೋಮವಾರ ನಗರದ ನಂಜರಾಜ ಬಹುದ್ದೂರ್ ಛತ್ರದಲ್ಲಿ ನಡೆಯಿತು.
೩:೧ರ ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ರವೆ ಉಪ್ಪಿಟ್ಟು, ಅವಲಕ್ಕಿ ಉಪ್ಪಿಟ್ಟು, ಕೇಸರಿಬಾತ್, ತರಕಾರಿ ಸಾಂಬಾರ್, ಚಪಾತಿ ಸೇರಿದಂತೆ ೭ ಅಡುಗೆಗಳಲ್ಲಿ ಲಾಟರಿ ಮೂಲಕ ದೊರೆತ ಅಡುಗೆಯನ್ನು ಅರ್ಧ ಗಂಟೆಯಲ್ಲಿ ಮಾಡಿದರು. ಪ್ರಾಯೋಗಿಕ ಪರೀಕ್ಷೆಯನ್ನು ಉಪಸಮಿತಿಯ ಅಧ್ಯಕ್ಷ ಕ.ರಾಮೇಶ್ವರಪ್ಪ, ಬಿಸಿಎಂ ಜಿಲ್ಲಾ ಅಧಿಕಾರಿ ಜಿ.ಎಸ್.ಸೋಮಶೇಖರ್ ಪರಿಶೀಲನೆ ನಡೆಸಿದರು. (ವರದಿ ಬಿ.ಎಂ)

Leave a Reply

comments

Related Articles

error: