ಕರ್ನಾಟಕ

ವೈದ್ಯ ವೃತ್ತಿ ಮಾಡಲು ಸಹನೆ ತಾಳ್ಮೆ ಬೇಕು: ಡಾ. ಶಿವಕುಮಾರ್

ರಾಜ್ಯ(ತುಮಕೂರು)ಜು.3:- ವೈದ್ಯ ವೃತ್ತಿ ಒಂದು ಪವಿತ್ರವಾದ ವೃತ್ತಿ ಇದನ್ನು ಮಾಡಲು ಸಹನೆ, ತಾಳ್ಮೆ ಬೇಕು, ಸೇವಾ  ಮನೋಭಾವವನ್ನು ಹೊಂದಿರಬೇಕು ಎಂದು ತಾ. ವೈದ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದರು.

ತಿಪಟೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆದಿತ್ಯ ಪಬ್ಲಿಕ್ ಸ್ಕೂಲ್‍ ವತಿಯಿಂದ ಏರ್ಪಡಿಸಿದ್ದ ವೈದ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು ಮಾತನಾಡಿ, ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ವೈದ್ಯರು ತುಂಬಾ ಸೇವಾ ಮನೋಭಾವ ಇರುವ ವೈದ್ಯರು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇವರು ಇವರಿಗೆ ಆಯುಷ್ಯ ಅರೋಗ್ಯವನ್ನು ಕರುಣಿಸಲಿ ಎಂದರು. ಇದೇ ಸಂದರ್ಭದಲ್ಲಿ ಎಲ್ಲಾ ವೈದ್ಯರುಗಳಿಗೆ ಆದಿತ್ಯ ಪಬ್ಲಿಕ್ ಶಾಲಾ ಮಕ್ಕಳು ಚಿಕ್ಕ ಚಿಕ್ಕ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು. ಮಕ್ಕಳಿಗೆ ಆಸ್ಪತ್ರೆ ವತಿಯಿಂದ ಚಾಕಲೇಟು ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯರುಗಳಾದ ವಿಜಯಕುಮಾರ್, ವಿನುತಾ, ರೇಣುಕಾ, ಶಕುಂತಲಾ, ಸ್ಕೂಲ್‍ನ ಕೋ-ಆರ್ಡಿನೇಟರ್ ಅನುಷಾ, ಆದಿತ್ಯ, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: