ಕರ್ನಾಟಕಪ್ರಮುಖ ಸುದ್ದಿ

ಬೇನಾಮಿ ಕಂಪನಿ ಮೂಲಕ ಟೆಂಡರ್ : ಶಾಸಕಿ ಗೀತಾ ಮಹದೇವಪ್ರಸಾದ್ ವಿರುದ್ಧ ದೂರು ದಾಖಲು

ರಾಜ್ಯ(ಚಾಮರಾಜನಗರ)ಜು.4:- ರೂಫ್ ಟಾಪ್ ಸೋಲಾರ್ ಘಟಕ ಅಳವಡಿಕೆ ಯೋಜನೆಯಲ್ಲಿ ಬೇನಾಮಿ ಕಂಪನಿ ಮೂಲಕ ಟೆಂಡರ್ ಪಡೆದಿದ್ದಾರೆ  ಎಂದು ಗುಂಡ್ಲುಪೇಟೆ ಕಾಂಗ್ರೆಸ್ ಶಾಸಕಿ ಗೀತಾ ಮಹದೇವಪ್ರಸಾದ್ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದ್ದು,  ಆದಾಯ ತೆರಿಗೆ ಇಲಾಖೆಯಲ್ಲಿ  ದೂರು ದಾಖಲಾಗಿದೆ.

ರಾಜ್ಯದಲ್ಲಿ ನಿರ್ಮಾಣಗೊಳ್ಳಲಿರುವ 193 ಗೋದಾಮು ನಿಗಮದ ಕಟ್ಟಡಗಳಲ್ಲಿ ರೂಫ್ ಟಾಪ್ ಸೋಲಾರ್ ಘಟಕಗಳಲ್ಲಿ 18 ಲಕ್ಷ ರೂ. ಪಾವತಿಸಿ 2.500 ಕೋಟಿ ರೂ. ಮೊತ್ತದ ಟೆಂಡರ್ ಪಡೆದಿರುವ ಆರೋಪ  ಎದುರಾಗಿದ್ದು, ರಾಜ್ಯ ಗೋದಾಮು ನಿಗಮದಲ್ಲಿ ರೂಫ್ ಟಾಪ್ ಸೋಲಾರ್ ಉತ್ಪಾದನಾ ಘಟಕ ಅಳವಡಿಕೆಯಲ್ಲಿ  ಟೆಂಡರ್  ಪ್ರಕ್ರಿಯೆಯಲ್ಲಿ ಕೇವಲ ಶಾಸಕಿ ಗೀತಾ ಮಹದೇವಪ್ರಸಾದ್ ಅವರ ನಿಯಂತ್ರಣದಲ್ಲಿರುವ ಕಂಪನಿ ಮಾತ್ರ ಭಾಗವಹಿಸಿತ್ತು ಎನ್ನಲಾಗುತ್ತಿದೆ.

ಬೆಂಗಳೂರಿನ ಎಸ್.ಟಿ. ಮೂರ್ತಿ ಎಂಬವರು  100 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಉತ್ಪಾದನಾ ಘಟಕಗಳ ಟೆಂಡರ್ 25 ವರ್ಷಗಳ  ಅವಧಿಗೆ ಪಡೆಯಲಾಗಿದೆ ಎಂದು ತನಿಖೆಗೆ ಕೋರಿ ಆದಾಯ ತೆರಿಗೆ ಇಲಾಖೆಯಲ್ಲಿ  ದೂರು ದಾಖಲಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: