ಕರ್ನಾಟಕ

ಸಂಚಾರ ಠಾಣೆ ಆರಕ್ಷಕರ ಕ್ಷಿಪ್ರ ಕಾರ್ಯಾಚರಣೆ: ಅಡ್ಡಾದಿಡ್ಡಿ ವಾಹನಗಳ ತೆರವು

ಚಾಮರಾಜನಗರ, ಜು.4: ಜಿಲ್ಲಾಸ್ಪತ್ರೆಯ ಮುಂಭಾಗ ಅಡ್ಡಾದಿಡ್ಡಿ‌ ನಿಲ್ಲಿಸಲಾಗಿದ್ದ ವಾಹನಗಳನ್ನು ಇಂದು ಸಂಚಾರ ಠಾಣೆಯ ಜೊತೆ ಪಟ್ಟಣ ಪೊಲೀಸರು ತೆರವು ಮಾಡಿದ್ದಾರೆ.

ಚಾಮರಾಜನಗರ ಪಟ್ಟಣದ ಬಹುತೇಕ‌ ಕಡೆಗಳಲ್ಲಿ ವಾಹನ ನಿಲುಗಡೆಗೆ ಕಷ್ಟಪಡಬೇಕಾಗಿದ್ದರಿಂದ ಪೊಲೀಸರ ಮತ್ತು ವಾಹನ ಸವಾನರ ನಡುವೆ ಗಲಾಟೆ ನಡೆದಿತ್ತು. ಮುಂಜಾನೆಯೆ ಪಟ್ಟಣ ಠಾಣೆ ಸಬ್ ಇನ್ಸಪೆಕ್ಟರ್ ಸಾಗರ್, ಸಂಚಾರಿ ಠಾಣೆಯ ದೀಪಕ್ ತಮ್ಮ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆಗೆ ಇಳಿದು ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳನ್ನು ಪೊಲೀಸರ  ವಾಹನಕ್ಕೆ ತುಂಬಿಕೊಂಡು ಹೋಗಿದ್ದಾರೆ. ಮುಂದೆ ಇಂತಹ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮದ ಅರಿವು ಮೂಡಿಸಲಾಗುವುದು ಎಂದಿದ್ದಾರೆ. (ವರದಿ: ಆರ್.ವಿ.ಎಸ್, ಎಲ್.ಜಿ)

Leave a Reply

comments

Related Articles

error: