ಕರ್ನಾಟಕ

ಗುಡ್ಡದಲ್ಲಿ ಹೆಚ್ಚಿದ ಚಿರತೆಗಳ ತಿರುಗಾಟ : ಸ್ಥಳೀಯರಲ್ಲಿ ಆತಂಕ

ರಾಜ್ಯ(ಮಂಡ್ಯ)ಜು.4:- ಮಂಡ್ಯಹಲಗೂರು ಗ್ರಾಮದ ಸಮೀಪದ ಗುಡ್ಡದಲ್ಲಿ ಚಿರತೆಗಳ ತಿರುಗಾಟ ಹೆಚ್ಚಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಸಮೀಪವಿರುವ ಗುಡ್ಡದ ಬಳಿ ಚಿರತೆಗಳು ಓಡಾಡುತ್ತಿರುವ ಕುರಿತು ದನಗಾಹಿಗಳು ವಿಡಿಯೋ ಮಾಡಿದ್ದು, ಕಳೆದ ಎರಡು ತಿಂಗಳಿನಿಂದ ಹಲಗೂರು ಸುತ್ತಮುತ್ತ ಜಾನುವಾರುಗಳನ್ನು ತಿಂದು ಆತಂಕ ಹುಟ್ಟಿಸಿವೆ. ಕಳೆದ ವಾರವಷ್ಟೇ ಅಂತರವಳ್ಳಿ ಗ್ರಾಮದ ಬಳಿ ವೈದ್ಯರ ಮನೆಯಲ್ಲಿದ್ದ   ನಾಯಿಯನ್ನು ಚಿರತೆ  ತಿಂದು ಹೋಗಿದೆ ಎನ್ನಲಾಗಿತ್ತು. ಇದೀಗ ಚಿರತೆಯ ತಿರುಗಾಟ ಹೆಚ್ಚಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: