ಕರ್ನಾಟಕಪ್ರಮುಖ ಸುದ್ದಿ

ಕಂಬಳಕ್ಕೆ ರಾಷ್ಟ್ರಪತಿ ಅಂಗೀಕಾರ ಸಂಘಟಿತ ಪ್ರಯತ್ನಕ್ಕೆ ಸಿಕ್ಕ ಫಲ: ಸದಾನಂದಗೌಡ

ಬೆಂಗಳೂರು,ಜು.4- ಕರಾವಳಿಯ ಪ್ರತಿಷ್ಠಿತ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿ ಅಂಗೀಕಾರ ನೀಡಿದ್ದಾರೆ. ಇದು ಸಂಘಟಿತ ಪ್ರಯತ್ನದ ಫಲ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.

ರಾಜ್ಯಪಾಲರಿಂದ ರಾಷ್ಟ್ರಪತಿ ಅಂಗೀಕಾರಕ್ಕೆ ಹೋಗಿದ್ದ ಕಂಬಳದ ವಿಶೇಷ ವಿಧೇಯಕ. ಇದರಲ್ಲಿ ಕೇಂದ್ರ ಸರ್ಕಾರದ ಎಡೆಬಿಡದ ಪ್ರಯತ್ನವೂ ಹೆಚ್ಚಾಗಿ ಸೇರಿದೆ. ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ವಿಶೇಷ ವಿಧೇಯಕ ಮಾಡಿತ್ತು. ಇಂದು ರಾಷ್ಟ್ರಪತಿಯವರು ಕಂಬಳದ ವಿಶೇಷ ವಿಧೇಯಕಕ್ಕೆ ಅಂಗೀಕಾರ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ನಲ್ಲಿ ಕಂಬಳದ ಸ್ಟೇಡಿಯಂ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಯನ್ನು ಮೀಸಲಾಗಿಡಲಾಗಿತ್ತು ಎಂದ ಅವರು, ಕರಾವಳಿಯ ಪ್ರತಿಷ್ಠಿತ ರೈತರ ಮನರಂಜನೆಯ ಕ್ರೀಡೆಗೆ ಕಳೆದ ಹತ್ತು ವರ್ಷಗಳಿಂದ ಕಾರ್ಮೋಡ ಕವಿದಿತ್ತು . ಏಳು ಬೀಳು ಗಳನ್ನೂ ಕಂಡಿತ್ತು. ಇಂದು ಕರಾವಳಿಗೆ ಅಂಗೀಕಾರ ಸಿಕ್ಕಿರುವುದು ಕರಾವಳಿ ಜನರ ಹೋರಾಟಕ್ಕೆ ಸಂದ ಫಲ ಎಂದು ಹೇಳಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: