ದೇಶಪ್ರಮುಖ ಸುದ್ದಿ

ಜಯಲಲಿತಾರ ಎಸ್ಟೇಟ್‍ನಲ್ಲಿ ಅಕೌಂಟಂಟ್ ಶವ ಪತ್ತೆ : ಕೊಡ್ನಾಡ್‍ನಲ್ಲಿದು 4ನೇ ಸಾವು !

ಊಟಿ, ಜುಲೈ 4 : ಜೆ. ಜಯಲಲಿತಾ ಅವರ ಒಡೆತನದ ಕೊಡನಾಡ್ ಎಸ್ಟೇಟ್‍ನಲ್ಲಿ ಮತ್ತೊಂದು ಸಾವು ಪತ್ತೆಯಾಗಿದ್ದು ಅಕೌಂಟೆಂಟ್ ಶವವಾಗಿ ಸಿಕ್ಕಿದ್ದಾರೆ.

ಎಸ್ಟೇಟ್ ಗೆ ಸೇರಿದ 28 ವರ್ಷ ವಯಸ್ಸಿನ ಅಕೌಂಟಂಟ್ ದಿನೇಶ್ ಕುಮಾರ್ ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ನಂತರ ಅವರ ಕೊಡನಾಡ್ ಎಸ್ಟೇಟ್‍ ಸಿಬ್ಬಂದಿಯ ನಿಗೂಢ ಸಾವಿನ ಸರಣಿ ಮುಂದುವರೆದಿದೆ.

ಇದರೊಂದಿಗೆ ಕೊಡನಾಡ್ ಎಸ್ಟೇಟ್‍ನಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದ್ದು, ಜಯಲಲಿತಾ ಅವರ ಕೊಡನಾಡ್ ಎಸ್ಟೇಟ್‍ನ ಮೂರು ಮಂದಿ ಅಕೌಂಟೆಂಟ್‍ಗಳ ಪೈಕಿ ದಿನೇಶ್ ಕೂಡಾ ಒಬ್ಬರಾಗಿದ್ದರು. ದಿನೇಶ್ ಅವರ ಶವ ಕೊಥಗಿರಿಯ ಅವರ ನಿವಾಸದಲ್ಲಿ ಫ್ಯಾನ್‍ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದ್ದಾರಾದರೂ ನಿಗೂಢ ಸಾವಿ ಸರಣಿ ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕಳೆದ 15 ದಿನಗಳಿಂದ ಅಕೌಂಟೆಂಟ್ ದಿನೇಶ್ ಕೆಲಸಕ್ಕೆ ಹೋಗಿರಲಿಲ್ಲ. ಅನಾರೋಗ್ಯದ ಕಾರಣದಿಂದ ರಜೆಯಲ್ಲಿದ್ದ ಎಂದು ತಿಳಿದು ಬಂದಿದೆ. ದಿನೇಶ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಅವರ ತಾಯಿ ಹಾಗೂ ತಂಗಿ ಮೊದಲು ನೋಡಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರಾದರೂ ಆಸ್ಪತ್ರೆಗೆ ಬರುವ ಮುನ್ನವೇ ದಿನೇಶ್ ಸಾವನ್ನಪ್ಪಿದ್ದ ಎಂದು ವೈದ್ಯರು ಹೇಳಿದ್ದಾರೆ.

-ಎನ್.ಬಿ.

Leave a Reply

comments

Related Articles

error: