ಪ್ರಮುಖ ಸುದ್ದಿ

ಜಿಎಸ್‌ಟಿಯಿಂದ ೨೩೦೦ ಕೋಟಿ ಉಳಿತಾಯ

ಪ್ರಮುಖ ಸುದ್ದಿ, ನವದೆಹಲಿ, ಜು.೪: ಏಕರೂಪ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಜಾರಿಯಾದ ಬಳಿಕ ದೇಶದಲ್ಲಿ ೨೩೦೦ ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಜು.೧ರಿಂದ ಜಾರಿಯಾದ ಜಿಎಸ್‌ಟಿ ಇಂದಾಗಿ ಸಾರಿಗೆ ವಿಭಾಗದಲ್ಲಿ ದೇಶದ ಆರ್ಥಿಕತೆಗೆ ೨೩೦೦ ಕೋಟಿ ರೂ. ಉಳಿತಾಯವಾಗಲಿದೆ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಜಿಎಸ್‌ಟಿ ಜಾರಿಗಿಂತ ಮೊದಲು ಅಂತರ್ ರಾಜ್ಯ ತೆರಿಗೆ ವ್ಯವಸ್ಥೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯದ ಚೆಕ್‌ಪೋಸ್ಟ್‌ಗಳಲ್ಲಿ ಲಾರಿಗಳು ಹೆಚ್ಚು ಹೊತ್ತು ನಿಂತು ಸಾಗುತ್ತಿದ್ದವು. ಇದರಿಂದ ಸಮಯ ಮತ್ತು ಇಂಧನ ವ್ಯಯವಾಗುತ್ತಿತ್ತು. ಆದರೆ ಜಿಎಸ್‌ಟಿ ಜಾರಿಯಿಂದ ರಾಜ್ಯ ಚೆಕ್‌ಪೋಸ್ಟ್‌ಗಳನ್ನು ಮುಚ್ಚಲಾಗಿದ್ದು, ಪ್ರತಿ ವರ್ಷ ಪರೋಕ್ಷವಾಗಿ ಉಂಟಾಗುತ್ತಿದ್ದ ಇಂಧನ ನಷ್ಟಕ್ಕೆ ತಡೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಸಮಯದೊಂದಿಗೆ ಹಣವೂ ಉಳಿತಾಯವಾಗಲಿದೆ.
೨೦೦೫ರ ವಿಶ್ವಬ್ಯಾಂಕ್ ವರದಿ ಪ್ರಕಾರ ಚೆಕ್‌ಪೋಸ್ಟ್‌ಗಳಲ್ಲಿ ಲಾರಿಗಳ ತಪಾಸಣೆ ವಿಳಂಬದಿಂದ ಪರೋಕ್ಷವಾಗಿ ೯೦೦-೨೩೦೦ ಕೋಟಿ ರೂ. ನಷ್ಟ ಸಂಭವಿಸುತ್ತದೆ. ಆದರೆ ಜಿಎಸ್‌ಟಿ ಜಾರಿಯಾದ ಬಳಿಕ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳು ಗಡಿ ಚೆಕ್ ಪೋಸ್ಟ್ ಗಳನ್ನು ಮುಚ್ಚಿದ್ದು, ಇತರೆ ರಾಜ್ಯಗಳೂ ಕೂಡ ಶೀಘ್ರದಲ್ಲೇ ಇದೇ ಮಾರ್ಗ ಅನುಸರಿಸುವ ಸಾಧ್ಯತೆ ಇದೆ. (ವರದಿ ಬಿ.ಎಂ)

Leave a Reply

comments

Related Articles

error: