ಮೈಸೂರು

ಪ್ರಥಮಪ್ರಜೆಗೆ ಹೊಸ ಕಾರು ನೀಡಿದ ಪಾಲಿಕೆ

ಮೈಸೂರು,ಜು.4:-ಮೈಸೂರಿನ ಪ್ರಥಮ ಪ್ರಜೆ ಎಂ.ಜೆ.ರವಿಕುಮಾರ್ ಅವರಿನ್ನು ಮುಂದೆ ಹೊಸ ಕಾರಿನಲ್ಲಿ ನಗರ ವೀಕ್ಷಣೆ ನಡೆಸಲಿದ್ದಾರೆ. ಇದೇನು ಇದ್ದಕ್ಕಿದ್ದಂತೆ ಹೊಸ ಕಾರಿನಲ್ಲಿ ಓಡಾಟ ನಡೆಸೋದು ಅಂದ್ಕೋತಿದ್ದೀರಾ? ಪಾಲಿಕೆ ವತಿಯಿಂದ ಮೇಯರ್ ಅವರಿಗೆ ಬಿಳಿ ಬಣ್ಣದ ಇನೋವಾ ಕಾರನ್ನು ನೀಡಲಾಗಿದೆ.

ಹಿಂದಿನ ಮೇಯರ್ ಸಂದೇಶಸ್ವಾಮಿ ಅಧಿಕಾರಾವಧಿಯಲ್ಲಿ ಕರೋಲಾ ಕಾರು ಇತ್ತು. ಅದರಲ್ಲೇ ಎಂ.ಜೆ.ರವಿಕುಮಾರ್ ಕೂಡಾ ಓಡಾಟ ನಡೆಸಿದ್ದರು. ಇದೀಗ ಹೊಸದಾಗಿ 2.4 ವರ್ಶನ್ ನ ಬಿಳಿಬಣ್ಣದ ಆರು ಮಂದಿ ಕುಳಿತುಕೊಳ್ಳಬಹುದಾದ ಇನೋವಾ ಕಾರನ್ನು ಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್ ಅವರಿಗೆ ನೀಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: