ಸುದ್ದಿ ಸಂಕ್ಷಿಪ್ತ

ಡಾ.ಲೋಲಾಕ್ಷಿಗೆ ಉತ್ತಮ ಗೀತೆ ರಚನೆ ಪ್ರಶಸ್ತಿ

ಮೈಸೂರು.ಜು.4 : ಟಾರಿಯನ್ ಸಂಸ್ಥೆಯ ಕನ್ನಡ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯಿಂದ ನೀಡುವ ಉತ್ತಮ ಗೀತೆ ರಚನೆ ವಿಭಾಗದ ಪ್ರಶಸ್ತಿಯು ಪ್ರಸ್ತಕ ಸಾಲಿನಲ್ಲಿ ಡಾ.ಎನ್.ಕೆ.ಲೋಲಾಕ್ಷಿಯವರಿಗೆ ಲಭಿಸಿದೆ.

ಭಾವನ ಧ್ವನಿಸುರಳಿಯಲ್ಲಿ ನಾಗೇಶ್ ಕಂದೇಗಾಲ ರಾಗ ಸಂಯೋಜನೆಯ ಮೂಡಿಬಂದಿರುವ ‘ಮರಳಿಬಾರದೂರಿಗೆ ನಿನ್ನ ಪಯಣ ಗೀತೆಗೆ’ ಡಾ.ಎನ್.ಕೆ.ಲೋಲಾಕ್ಷಿ ಅವರಿಗೆ ಸಿನಿಮೇತರ ವಿಭಾಗದಲ್ಲಿ 2017ರ ಪ್ರಶಸ್ತಿ ಲಭಿಸಿದೆ.

ಕಳೆದ ಜೂ.25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ  ಡಾ.ಎಸ್.ಪಿ.ಬಿ, ವೇಣುಗೋಪಾಲ್ ರಾಜು, ರಘುದೀಕ್ಷಿತ್ ಹಲವು ಕಲಾಬಳಗದ ಸಮ್ಮುಖದಲ್ಲಿ ಲೋಲಾಕ್ಷಿ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: