ಮೈಸೂರು

ಶಂಕಿತ ಡೆಂಗ್ಯೂಗೆ ಮತ್ತೋರ್ವ ಬಾಲಕಿ ಬಲಿ

ಮೈಸೂರು,ಜು.4:- ಶಂಕಿತ ಡೆಂಗ್ಯೂಗೆ ಮತ್ತೋರ್ವ  ಬಾಲಕಿ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತಳನ್ನು ಜಯಪುರ  ಗ್ರಾಮದ ಡಿ.ಕುಮಾರ್ ಪುತ್ರಿ ಆಕಾಂಕ್ಷ(5) ಎಂದು ಹೇಳಲಾಗಿದೆ. ನೈರ್ಮಲ್ಯ ಕಾಪಾಡದ ಗ್ರಾಮ ಪಂಚಾಯತ್  ವಿರುದ್ಧ  ಗ್ರಾಮಸ್ಥರು ರೊಚ್ಚಿಗೆದ್ದು, ಮೈಸೂರು ತಾಲೂಕು ಜಯಪುರದಲ್ಲಿ ಹೆಚ್.ಡಿ.ಕೋಟೆ ಮೈಸೂರು ಮುಖ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಗ್ರಾಮ ಪಂಚಾಯತ್  ಶುಚಿತ್ವ ಕಾಪಾಡಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತೀವ್ರ ಜ್ವರದಿಂದ ಬಳಲಿ ಚಿಕಿತ್ಸೆ ಫಲಿಸದೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ರಸ್ತೆ ತಡೆದರು. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: