ಕರ್ನಾಟಕ

ಪ್ರಧಾನಿ ಮೋದಿ ರೈತರ ಕುರಿತು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ : ಎಸ್, ಆರ್.ಹಿರೇಮಠ್ ಆರೋಪ

ರಾಜ್ಯ(ಹುಬ್ಬಳ್ಳಿ)ಜು.4:- ಪ್ರಧಾನಿ ಮೋದಿ ರೈತರು, ದಲಿತರು, ಅಲ್ಪಸಂಖ್ಯಾತರ ಬಗ್ಗೆ ನಿರ್ಲಕ್ಷ ಧೋರಣೆ ತಾಳಿದ್ದು ಶ್ರೀಮಂತರ ಪರವಾಗಿದ್ದಾರೆ ಎಂದು ಸಮಾಜ ಪರಿವರ್ತನ ಸಮಾಜದ ಮುಖ್ಯಸ್ಥ, ಎಸ್, ಆರ್.ಹಿರೇಮಠ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಡವರ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಬಡವರು, ಶ್ರೀಮಂತರ ಮಧ್ಯೆತಾರತಮ್ಯ ಹೆಚ್ಚಳಬವಾಗುತ್ತಿದೆ. ದೇಶದ ಸಂಸ್ಕೃತಿ, ಗಾಳಿಗೆ ತೂರಿ ಮನಬಂದಂತೆ ಪ್ರಹಾರ ನಡೆಸುತ್ತಿದ್ದಾರೆ. ಮೋದಿ ನೀತಿಯಿಂದಾಗಿ ದೇಶ ಅಧೋಗತಿಗೆ ತೆರಳುತ್ತಿದೆ. ಎಚ್.ಎಂ.ಟಿ. ಸಂಸ್ಥೆಯ ಜಾಗವನ್ನು ವಿವಿಧ ವ್ಯಕ್ತಿಗಳು ,ಕಂಪನಿಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಎಫ್ ಐಆರ್ ದಾಖಲಿಸಲು, ಸಿಬಿಐಗೆ ದೂರು ನೀಡಲಾಗುವುದು. ಶಾಮೀಲಾದವರ ಮೇಲೆ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು. ಪ್ರಜಾಪ್ರಭುತ್ವ  ಉಳಿಸಲು ಜನಾಂದೋಲನ ನಡೆಸುವ, ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: