ಮೈಸೂರು

ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪೌರಕಾರ್ಮಿಕ ಮಹಿಳೆ ಸಾವು

ಮೈಸೂರು, ಜು.೪: ಅಡುಗೆ ಮಾಡುವಾಗ ಆಕಸ್ಮಿಕ ಬೆಂಕಿಯಿಂದ ತೀವ್ರ ಸುಟ್ಟ ಗಾಯಕ್ಕೊಳಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಪೌರ ಕಾರ್ಮಿಕ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರಾಜಮ್ಮ (೩೦)ಮೃತ ಪೌರ ಕಾರ್ಮಿಕ ಮಹಿಳೆ. ನಗರದ ಎನ್.ಆರ್.ಮೊಹಲ್ಲಾದ ಬಿ.ಬಿ.ಕೇರಿಯ ನಿವಾಸಿಯಾದ ರಾಜಮ್ಮ ಜೂ.೨೭ರಂದು ಅಡುಗೆ ಮಾಡುವ ಸಂದರ್ಭದಲ್ಲಿ ಆದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದರು. ಇವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾರೆ. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: