ಮೈಸೂರು

ಜು.6: ಜನತಾದಳ ಕಾರ್ಯಕರ್ತರ ಸಂಘಟನಾ ಸಭೆ

ಮೈಸೂರು,ಜು.4:- ದಿವಂಗತ ದೇವರಾಜ ಅರಸು ವೇದಿಕೆ ವತಿಯಿಂದ ಜುಲೈ 6 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಪಕ್ಷ ಬಲಪಡಿಸುವ ಉದ್ದೇಶದಿಂದ ಜನತಾದಳ ಕಾರ್ಯಕರ್ತರ ಸಂಘಟನಾ ಸಭೆ ಕರೆಯಲಾಗಿದ್ದು ಈ ಸಭೆಗೆ ಹೆಚ್ಚಿನ ಕಾರ್ಯಕರ್ತರು ಆಗಮಿಸಿ ಪಕ್ಷ ಬಲವರ್ಧನೆಗೊಳಿಸಬೇಕೆಂದು ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಬಿಳಿಕೆರೆ ತಿಳಿಸಿದರು.
ಹುಣಸೂರು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು ಇತ್ತಿಚೆಗೆ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಾಜಿ ಪ್ರದಾನಿ ಹಾಗೂ ಜೆ.ಡಿ.ಎಸ್ ವರಿಷ್ಠ ಹೆಚ್.ಡಿ. ದೇವೆಗೌಡರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ ಜನಪ್ರತಿನಿಧಿ ಹಾಗೂ ಕಾರ್ಯಕರ್ತರ ಸಭೆಗೆ ಕೆಲವರನ್ನು ಮಾತ್ರ ಕರೆದು ಹಲವು ನಿಷ್ಠಾವಂತ ಮುಖಂಡರನ್ನು ಕೈ ಬಿಡಲಾಗಿತ್ತು. ಇದರಿಂದ ಮನನೊಂದ ಆನೇಕ ಕಾರ್ಯಕರ್ತರು ಜುಲೈ 6 ರಂದು ಅರಸು ವೇದಿಕೆ ಅಡಿಯಲ್ಲಿ ಕರೆಯಲಾಗಿರುವ ಕಾರ್ಯಕರ್ತರ ಸಂಘಟನಾ ಸಭೆಗೆ ಹಾಜರಾಗಿ ಅಂದಿನ ಸಭೆಯ ಅಧ್ಯಕ್ಷತೆ ವಹಿಸುವ ಜೆ.ಡಿ.ಎಸ್ ರಾಜ್ಯ ಯುವ ಮುಖಂಡ ಪ್ರಜ್ವಲ್ ರೇವಣ್ಣನವರ ಮೂಲಕ ತಮ್ಮ ನೋವು ಹಾಗೂ ಅಭಿಪ್ರಾಯಗಳನ್ನು ವರಿಷ್ಠರಿಗೆ ತಿಳಿಸುವ ಜೊತೆಗೆ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೂಡ್ಲೂರು ಗೋವಿಂದೆಗೌಡ, ಜಗದೀಶ್,ಎಸ್.ನಿಂಗನಾಯ್ಕ, ಲೋಕೇಶ್,ಅಮಾವಾಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: