ಮನರಂಜನೆ

‘ಜಾನಿ ಜಾನಿ ಯಸ್ ಪಪ್ಪಾ’ ಗೆ ಶ್ರದ್ಧಾ ಶ್ರೀನಾಥ್ !

ಬೆಂಗಳೂರು, ಜು.4: ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ  ‘ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದಲ್ಲಿ ಜಾನಿ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸಲಿದ್ದಾರೆ. ಈ ಮೊದಲು ನಿರ್ದೇಶಕ ಪ್ರೀತಂ ಗುಬ್ಬಿ ರಚಿತಾ ರಾಮ್ ಅವರನ್ನು ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಿದ್ದರು. ಆದರೆ ಕಾರಣಾಂತರಗಳಿಂದ ರಚಿತಾ ರಾಮ್ ಚಿತ್ರ ತಂಡದಿಂದ ಹೊರಬಂದಿದ್ದರು.

ಈಗ ‘ಯೂ ಟರ್ನ್’ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಚಿತ್ರದ ನಾಯಕಿ ಎನ್ನುವುದು  ಪಕ್ಕಾ ಆಗಿದೆ. ಸದ್ಯ ಶ್ರದ್ಧಾ ನಟಿಸಿರುವ “ಆಪರೇಷನ್ ಅಲಮೇಲಮ್ಮ’ ಬಿಡುಗಡೆಗೆ ರೆಡಿಯಾಗಿದೆ. ಹೀಗಿರುವಾಗಲೇ ಶ್ರದ್ಧಾ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲೂ ಶ್ರದ್ಧಾ ಪಾತ್ರ ತುಂಬಾ ಭಿನ್ನವಾಗಿದೆಯಂತೆ. “ಜಾನಿ ಜಾನಿ ಯೆಸ್ ಪಪ್ಪಾ’, ಜಾನಿ ಮೇರಾ ನಾಮ್’ ಚಿತ್ರದ ಮುಂದುವರಿದ ಭಾಗದಂತಿದ್ದರೂ ಆ ಕಥೆಗೂ ಇಲ್ಲಿನ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲವಂತೆ. ಆದರೆ, ಈ ಚಿತ್ರಕ್ಕಾಗಿಯೂ ವಿಶೇಷವಾದ ಸೆಟ್ ಹಾಕಲಾಗುತ್ತಿದೆ.

ಈ ಚಿತ್ರದಲ್ಲಿ ರಂಗಾಯಣ ರಘು, ಅಚ್ಯುತ್, ಸಾಧುಕೋಕಿಲ, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ದುನಿಯಾ ವಿಜಯ್ ಅವರೇ ನಿರ್ಮಿಸುತ್ತಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: