ದೇಶಪ್ರಮುಖ ಸುದ್ದಿ

ಇನ್ಮುಂದೆ ಪ್ರಾದೇಶಿಕ ಭಾಷೆಗಳಲ್ಲೇ ವಾಟ್ಸ್ಯಾಪ್ ಸಂಭಾಷಣೆ

ಪ್ರಮುಖ ಸುದ್ದಿ, ನವದೆಹಲಿ,ಜು.4: ಭಾರತದಲ್ಲೇ 200 ಮಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ಸದ್ಯ 10 ಸ್ಥಳೀಯ ಭಾಷೆಗಳಲ್ಲಿ ಸಂಭಾಷಿಸಲು ವಿಶೇಷ ಫೀಚರ್ ವಾಟ್ಸಾಪ್ ನಲ್ಲಿದೆ. ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವಾಟ್ಸಾಪ್, ವೊಡಾಫೋನ್ ಜೊತೆಗೆ ಕೈಜೋಡಿಸಿದೆ.

ಭಾರತದ ಸ್ಥಳೀಯ ಭಾಷೆಗಳಲ್ಲಿ ಚಾಟ್ ಮಾಡಲು ವಿಶೇಷ ಫೀಚರ್ ಅಳವಡಿಸಿದೆ. ಹಿಂದಿ, ಮರಾಠಿ, ತಮಿಳು, ಬಂಗಾಳಿ ಸೇರಿದಂತೆ ವಿವಿಧ ಭಾಷೆಯ ಕಸ್ಟಮೈಸ್ಡ್ ಪೇಜ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹಂತಹಂತವಾಗಿ ನೀವು ಸೆಟ್ಟಿಂಗ್ಸ್ ಮಾಡಿಕೊಳ್ಳಬಹುದು. ಚಾಟ್ ಮಾಡುವ ಸಂದರ್ಭದಲ್ಲಿ ಭಾಷೆ ಬದಲಾಯಿಸಿಕೊಳ್ಳಲು ಆಪ್ಷನ್ ನೀಡಲಾಗಿದೆ. ಆ್ಯಪ್ ನಲ್ಲಿ ಸ್ಥಳೀಯ ಭಾಷೆಗಳಲ್ಲೂ ಚಾಟ್ ಮಾಡಲು ಅವಕಾಶ ಕಲ್ಪಿಸಿದರೆ ಬಳಕೆದಾರರಿಗೆ ಅನುಕೂಲವಾಗಲಿದೆ ಎನ್ನುವ  ನಿಟ್ಟಿನಲ್ಲಿ ಹೊಸ ಅಪ್ ಡೇಟ್ ಮಾಡಲಾಗಿದೆ.

ನಿಮ್ಮ ಸ್ಟೇಟಸ್ ಗಳನ್ನು ನಿಮಗಿಷ್ಟವಾದ ಭಾಷೆಯಲ್ಲಿ ಹಾಕಿಕೊಳ್ಳಬಹುದು. ನಿಮಗೆ ಬೇಕಾದ ಭಾಷೆಯಲ್ಲಿ ಮೆಸೇಜ್ ಶೇರ್ ಮಾಡಬಹುದು. ಭಾಷೆಯ ಆಯ್ಕೆ ಮಹತ್ವದ ಫೀಚರ್ ಆಗಿದ್ದು, ಇದಕ್ಕೆ ವೊಡಾಫೋನ್ ಸಾಥ್ ಕೊಟ್ಟಿದೆ ಎಂದು ವಾಟ್ಸಾಪ್ ಉಪಾಧ್ಯಕ್ಷ ನೀರಜ್ ಅರೋರಾ ತಿಳಿಸಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: