ಸುದ್ದಿ ಸಂಕ್ಷಿಪ್ತ

ಜು.6ಕ್ಕೆ ಆನಂದತೀರ್ಥ ಜ್ಞಾನ ಯಾತ್ರೆ

ಮೈಸೂರು.ಜು.4 : ಸರಸ್ವತಿಪುರಂನ ತುಳು ಶಿವಳ್ಳಿ ಮಾದ್ವ ಬ್ರಾಹ್ಮಣ ಮಹಾಮಂಡಲವು ಆನಂದತೀರ್ಥ ಜ್ಞಾನಯಾತ್ರೆಯನ್ನು ಜು.6ರ ಬೆಳಿಗ್ಗೆ 7.30ರಿಂದ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು, ಉಡುಪಿ ಅದಮಾರು ಮಠದ ಕಿರಿಯಪಟ್ಟ ಶ್ರೀಈಶಪ್ರಿಯ ತೀರ್ಥರು ಸಾನಿಧ್ಯ ವಹಿಸುವರು. ಉಡುಪಿ ತುಶಿಮಾಮ ಅಧ್ಯಕ್ಷ ಕೆ.ಅರವಿಂದ ಆಚಾರ್ಯ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಪ್ರದೀಪ ಕುಮಾರ ಕಲ್ಕೂರ ಭಾಗವಹಿಸುವರು.

ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: