ಸುದ್ದಿ ಸಂಕ್ಷಿಪ್ತ

ಜು.16 -20ರವರೆಗೆ ಮೈಸೂರು ವಿವಿಯ ಅಂತರ ಕಾಲೇಜು ಫುಟ್ ಬಾಲ್ ಪಂದ್ಯಾವಳಿ

ಮೈಸೂರು.ಜು.4 : ಮೈಸೂರು ವಿವಿಯ ಅಂತರ ಕಾಲೇಜುಗಳ ಚೀಫ್ ಜಸ್ಟೀಸ್ ಹೊಂಬೇಗೌಡ ಸ್ಮಾರಕ ಪುಟ್ ಬಾಲ್ ಪಂದ್ಯಾವಳಿಯನ್ನು ಫಿಸಿಕಲ್ ಎಜುಕೇಷನ್ ಟೀಚರ್ಸ್ ಅಕಾಡೆಮಿ ಟ್ರಸ್ಟ್ ಪ್ರಯೋಜಕತ್ವದಲ್ಲಿ ಆಗಸ್ಟ್ 16 ರಿಂದ 20ರವರೆಗೆ ನಾಕ್/ಔಟ್-ಕಮ್-ಲೀಗ್ ಮಾದರಿಯಲ್ಲಿ ಹಮ್ಮಿಕೊಂಡಿದೆ.

ವಿವಿಯ ಫುಟ್ ಬಾಲ್ ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ತಲಾ 300 ರೂ ಪ್ರವೇಶ ಶುಲ್ಕವಿದೆ. ಆಗಸ್ಟ್ 11ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿಕೊಂಡ ತಂಡಗಳು ಆಗಸ್ಟ್ 16ರ ಉದ್ಘಾಟನೆ ದಿನದಂದು ಬೆಳಿಗ್ಗೆ 8ಕ್ಕೆ ಸಮವಸ್ತ್ರ ಧರಿಸಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.(ಕೆ.ಎಂ.ಆರ್)

Leave a Reply

comments

Related Articles

error: