ಮೈಸೂರು

ಎಸಿಬಿ ಬಲೆಗೆ ಬಿದ್ದ ಪಿಯು ಉಪನಿರ್ದೇಶಕ ಜಯಪ್ರಕಾಶ್ ಅಮಾನತು

ಮೈಸೂರು,ಜು.4:-ಲಂಚ ಸ್ವೀಕರಿಸುವಾಗ ಮೈಸೂರಿನ ಪಿಯು ಉಪನಿರ್ದೇಶಕ ಜಯಪ್ರಕಾಶ್ ಎಸಿಬಿ ಬಲೆಗೆ ಬಿದ್ದಿದ್ದು ಅವರನ್ನು ಅಮಾನತುಗೊಳಿಸಲಾಗಿದೆ.

ಕುವೆಂಪುನಗರದ ವಿಜಯ ಚೇತನ ಕಾಲೇಜಿನ ಮಾನ್ಯತೆ ನವೀಕರಣಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು.2.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಜಯಪ್ರಕಾಶ್ ಹಾಗೂ ಅವರ ಕಾರಿನ ಚಾಲಕ ಇಬ್ಬರೂ ಎಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪೊಲೀಸರ ವಶದಲ್ಲಿದ್ದರು. ಇದೀಗ ಶಿಕ್ಷಣ ಇಲಾಖೆ ಜಯಪ್ರಕಾಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: