ಕರ್ನಾಟಕಮೈಸೂರು

ಆಗಸ್ಟ್ 3 ರಿಂದ ಮೈಸೂರು ವಿವಿ ಬಿಎಡ್ ಪದವಿ ಲಿಖಿತ ಪರೀಕ್ಷೆಗಳು; ಶುಲ್ಕ ವಿವರ ಪ್ರಕಟ

ಮೈಸೂರು, ಜುಲೈ 4 : ಮೈಸೂರು ವಿಶ್ವವಿದ್ಯಾನಿಲಯದ ಬಿ.ಎಡ್. ಪದವಿಗಳ ಒಂದು ವರ್ಷದ ಸಿಬಿಸಿಎಸ್ ಮತ್ತು ಸಿಎಜಿಪಿ ಸ್ಕೀಂಗಳ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಆಗಸ್ಟ್ 3 ರಿಂದ ಲಿಖಿತ ಪರೀಕ್ಷೆಗಳು ಪ್ರಾರಂಭವಾಗಲಿದೆ.

ಅರ್ಜಿ ಮತ್ತು ಪರೀಕ್ಷಾ ಶುಲ್ಕವನ್ನು ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಿಗೆ ಪಾವತಿಸುವುದು. ಪರೀಕ್ಷಾ ಶುಲ್ಕ ಮತ್ತು ಅರ್ಜಿ ಸಲ್ಲಿಸಲು ಜುಲೈ 15 ರ ಕೊನೆಯ ದಿನಾಂಕ. ಪೂರ್ಣ 1 ಸೆಮಿಸ್ಟೆರ್ ಪರೀಕ್ಷೆಗೆ ಪರೀಕ್ಷಾ ಶುಲ್ಕ ರೂ. 1090/-, ಪ್ರಾಯೋಗಿಕ ಪರೀಕ್ಷೆ ಇಲ್ಲದೆ ಒಂದು ವಿಷಯಕ್ಕೆ ರೂ. 370/- ಹಾಗೂ ಅಂಕಪಟ್ಟಿ ಶುಲ್ಕ ರೂ. 260/- ಪಾವತಿಸಬೇಕಿರುತ್ತದೆ.

ವಿದ್ಯಾವಿಷಯಕ ಪರಿಷತ್ ಸಭೆಯ ನಿರ್ಣಯದಂತೆ ಸಿಬಿಸಿಎಸ್ ಮತ್ತು ಸಿಎಜಿಪಿ ಸ್ಕೀಂಗಳಡಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿರುವ ವಿಷಯಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಮತ್ತೆರಡು ಅವಕಾಶವನ್ನು ಜುಲೈ/ಆಗಸ್ಟ್ 2017 ಹಾಗೂ ನವೆಂಬರ್/ಡಿಸೆಂಬರ್-2017 ಅಂತಿಮವಾಗಿ ನೀಡಲಾಗಿದೆ. ಈ ವಿದ್ಯಾರ್ಥಿಗಳು ಸಾಮಾನ್ಯ ಪರೀಕ್ಷಾ ಶುಲ್ಕದ ನಾಲ್ಕು ಪಟ್ಟು ಪಾವತಿಸಬೇಕಿರುತ್ತದೆ. ಹೆಚ್ಚಿನ ಮಾಹಿತಿಗೆ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರ ಕಾರ್ಯಾಲಯವನ್ನು ಸಂಪರ್ಕಿಸಬಹುದು.

-ಎನ್.ಬಿ.

Leave a Reply

comments

Related Articles

error: