ಮೈಸೂರು

ವಿದ್ಯೆಗಳನ್ನೂ ಅರಿತಿದ್ದರೆ ಜೀವನದಲ್ಲಿ ಸಾಧನೆ ಸುಲಭ : ರವಿ ಡಿ.ಚನ್ನಣ್ಣನವರ್

ಮೈಸೂರು,ಜು.4:- ಮನುಷ್ಯನಾದವನಿಗೆ ಎಲ್ಲ ವಿದ್ಯೆಗಳಲ್ಲಿಯೂ ಆಸಕ್ತಿ ಇರಬೇಕು. ಎಲ್ಲ ವಿದ್ಯೆಗಳನ್ನೂ ಅರಿತಿದ್ದರೆ ಜೀವನದಲ್ಲಿ ಸಾಧನೆ ಸುಲಭ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.

ಪೊಲಿಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪೊಲೀಸ್ ಕುಟುಂಬ ವರ್ಗದವರಿಗೆ ಕೌಶಲ್ಯ ವೃದ್ಧಿ ತರಬೇತಿ ಮತ್ತು ವಾಹನ ಚಾಲನಾ ತರಬೇತಿ ಹಾಗೂ ಸ್ಪೋಕನ್ ಇಂಗ್ಲೀಷ್ ಕೋರ್ಸ್  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪೊಲೀಸರು ಸದಾ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಅವರ ಕುಟುಂಬದವರ ಕಡೆ ಹೆಚ್ಚಿನ ಗಮನ ನೀಡಲು  ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅವರ ಕುಟುಂಬಿಕರು ತಮ್ಮ ಅನಿವಾರ್ಯ ಕಾರಣಗಳಲ್ಲಿ ವಾಹನ ಚಲಾಯಿಸಬೇಕಾಗಿ ಬರಬಹುದು. ಅಂತಹ ಸಂದರ್ಭಗಳನ್ನು ಎದುರಿಸಲು ಈ ತರಬೇತಿ ಕಾರ್ಯಕ್ರಮ ಉಪಯೋಗಕರವಾಗಲಿದೆ. ಅಷ್ಟೇ ಅಲ್ಲದೇ ನಮ್ಮ ಭಾಷೆ ಕನ್ನಡವಾದರೂ ವ್ಯಾವಹಾರಿಕವಾಗಿ ಇಂಗ್ಲಿಷ್ ಬೇಕೇ. ಬೇಕು. ಅದರಿಂದ ಇಂಗ್ಲಿಷ್ ಕಲಿಕೆಯೆಡೆಗೂ ಗಮನ ಹರಿಸಿದರೆ ಒಳ್ಳೆಯದು ಎಂದರು. ಈ ಸಂದರ್ಭ ಅಡಿಶನಲ್ ಎಸ್ಪಿ ರುದ್ರಮುನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: