ಕರ್ನಾಟಕ

ಭಾರತ ಸೇವಾದಳ ಶಿಕ್ಷಕ್ ಮಿಲಾಪ್ ಶಿಬಿರದ ಉದ್ಘಾಟನೆ

ರಾಜ್ಯ(ಮಂಡ್ಯ)ಜು.4:-ಕೆ ಆರ್ ಪೇಟೆ ಪಟ್ಟಣದ ಬಿ ಆರ್ ಸಿ ಯಲ್ಲಿ ಭಾರತ ಸೇವಾದಳ ಶಿಕ್ಷಕ್ ಮಿಲಾಪ್ ಶಿಬಿರದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿಯಾದ ಲಿಂಗರಾಜು ನೆರವೇರಿಸಿದರು.

ನಂತರ ಮಾತನಾಡಿದ ಲಿಂಗರಾಜು ಗಾಂಧೀಜಿ ಯವರ ತತ್ವ ,ಕಾರ್ಯಕ್ರಮ ಗಳ ತಳಹದಿಯ ಮೇಲೆ ಯುವಕರನ್ನು ಸಂಘಟಿಸಿ ರಾಷ್ಟ್ರೀಯ ಸೇವೆಗಾಗಿ ತರಬೇತಿ ನೀಡುವುದು. ಯುವಕರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಅವರಲ್ಲಿ ಸಂಯಮ,ಧೈರ್ಯ, ತ್ಯಾಗ ಸರಳತೆ ,ಸೇವೆ,ತಾಳ್ಮೆ,ಸಹಕಾರ ಮತ್ತು ಪೂರ್ಣ ಮನೋಭಾವನೆಯನ್ನು ಮೂಡಿಸಬೇಕು. ಸೇವಾದಳ ಶಿಕ್ಷಣದ ಮೂಲಕ ಜನರ ಆರೋಗ್ಯ ಮತ್ತು ಶಾರೀರಿಕ ದೃಢತೆಯನ್ನು ಬಲಗೊಳಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಪೂರ್ಣ ಚಂದ್ರ ತೇಜಸ್ವಿ,ಗಣೇಶ್,ಪ್ರಸನ್ನಕುಮಾರ್ ,ಕಾರ್ಯದರ್ಶಿ ಚಂದ್ರಪ್ಪ,ಕಸಾಪ ಕಾರ್ಯದರ್ಶಿ ಶ್ರಿಧರ್,ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: