ಕರ್ನಾಟಕ

ಪೂರ್ವಿಕರ ವಿಶೇಷ ಪ್ರತಿಭೆಗಳನ್ನು ಸಮಾಜಕ್ಕೆ ತಿಳಿಸಲು ದತ್ತಿ ಕಾರ್ಯಗಳು ಪೂರಕವಾಗಿ ಕಾರ್ಯನಿರ್ವಸುತ್ತಿವೆ : ಎ.ಎಂ.ನಾಗಮಲ್ಲಪ್ಪ

ರಾಜ್ಯ(ಚಾಮರಾಜನಗರ) ಜು.4: – ನಿಮ್ಮ ಪೂರ್ವಿಕರ ಜೀವನ ಶೈಲಿ ಬದುಕು ಬರಹ ಅದರಲ್ಲಿದ್ದ ವಿಶೇಷ ಪ್ರತಿಭೆಗಳನ್ನು ಸಮಾಜಕ್ಕೆ ತಿಳಿಸಲು ದತ್ತಿ ಕಾರ್ಯಗಳು ಪೂರಕವಾಗಿ ಕಾರ್ಯನಿರ್ವಸುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಎ.ಎಂ.ನಾಗಮಲ್ಲಪ್ಪ ಅಭಿಪ್ರಾಯಪಟ್ಟರು.
ನಗರದ ದೇವಾಂಗ ಬೀದಿಯಲ್ಲಿ ಇರುವ ದೊಡ್ಡಗರಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಬರಹಗಾರರ ಹಾಗೂ ಕಲಾವಿದರ ಬಳಗ ಮತ್ತು ದೊಡ್ಡಗರಡಿ ಸಂಯುಕ್ತ ಅಶ್ರಯದಲ್ಲಿ ದಿವಂಗತ ಶ್ರೀ ರಾಮಕೃಷ್ಣ ಶೆಟ್ಟಿಪ್ಪ  ದತ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ದತ್ತಿ ಕಾರ್ಯಕ್ರಮಗಳ ಜೊತೆಗೆ ಸಾಹಿತ್ಯಾಸಕ್ತರಿಗೆ ಕವಿಗೋಷ್ಠಿಯನ್ನುಆಯೋಜಿಸಿ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಸಂಶೋಧಕ ಎನ್.ಅಶ್ವತ್ಥನಾರಾಯಣ ಮಾತನಾಡಿ. ಮೈಸೂರು ರಾಜಮನೆತನದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಜೆಟ್ಟಿ ಜನಾಂಗದವರು ಈ ನೆಲದಲ್ಲಿ ಕಸರತ್ತು ನಡೆಸಿ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗೆದ್ದು ರಾಜಮನೆತನಕ್ಕೆ ಹೆಮ್ಮೆ ಮತ್ತು ಕೀರ್ತಿ ತರುತ್ತಿದ್ದರು ಎಂದರು.
ಜಿಲ್ಲಾ ಬರಹಗಾರರ ಹಾಗೂ ಕಲಾವಿದರ ಬಳಗದ ಅಧ್ಯಕ್ಷ ಎಸ್.ನಿರಂಜನ್‍ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಆರ್.ಶ್ರೀನಿವಾಸ, ಸಿ.ಎನ್.ನರಸಿಂಹಜೆಟ್ಟಿ, ಸಿರಿಗನ್ನಡ ವೇದಿಕೆ ರಾಜ್ಯ ಉಪಧ್ಯಕ್ಷೆ ಸೌಗಂಧಿಕಾ ಜೋಯಿಸ್, ಶ್ರೀಕಂಠಜೆಟ್ಟಪ್ಪ ಮಾತನಾಡಿದರು. ದತ್ತಿದಾನಿಗಳಾದ ಚಾ.ಶ್ರೀ.ಜಗದೀಶ್, ಪದ್ಮಾಕ್ಷಿ, ಮುಕುಂದರಾಜು, ಸಿ.ಎಸ್. ಮಂಜುಳ, ವೆಂಕಟೇಶ್‍ಬಾಬು, ಚಂದ್ರುಹೆಗ್ಗೋಠಾರ, ವಾಸುಮೈಸೂರು ಮುಂತಾದವರು ಕವನವಾಚಿಸಿದರು. ಜಯಭಾರತಿಜಗದೀಶ್, ಪಲ್ಲವಿ, ವಸಂತಕುಮಾರ್, ವಸುಂಧರ, ಪುಟ್ಟಣ್ಣಜೆಟ್ಟಪ್ಪ, ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: