ಪ್ರಮುಖ ಸುದ್ದಿ

ಮಾಹಿತಿ ಸೋರಿಕೆ: ಆರೋಪಿ ಬಂಧನ

ಪ್ರಮುಖ ಸುದ್ದಿ, ಬೆಂಗಳೂರು, ಜು.೪: ತಾನು ಕೆಲಸಕ್ಕಿದ್ದ ಕಂಪನಿಯ ಮಾಹಿತಿಯನ್ನು ಮತ್ತೊಂದು ಕಂಪನಿಗೆ ಸೋರಿಕೆ ಮಾಡುತ್ತಿದ್ದ ಕ್ಯಾಡ್ ಎಂಜಿನಿಯರ್‌ನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರಂನ ಮೇಡಳ್ಳಿ, ವಿನಾಯಕನಗರದ ಶ್ರೀಶ ರಾವ್.ವಿ.ಎಂ.(೨೩) ಬಂಧಿತ ವಂಚಕ ಎಂಜನಿಯರ್. ಪ್ರತಿಷ್ಠಿತ ದಿ ನ್ಯೂ ಜನರೇಷನ್ ಎಂಬ ಕಂಪನಿಯಲ್ಲಿ ಕ್ಯಾಡ್ ಎಂಜನಿಯರ್ ಆಗಿ ನೇಮಕಗೊಂಡಿದ್ದ ಈತನಿಗೆ ರೇಡಿಯಸ್ ಮ್ಯಾಪ್‌ಗಳನ್ನು ತಯಾರಿಸುವ ಜವಾಬ್ದಾರಿ ನೀಡಲಾಗಿತ್ತು. ಈತ ಕಂಪನಿಯ ಅನುಮತಿ ಪಡೆಯದೇ ಕಂಪನಿಗೆ ಸಂಬಂಧಿಸಿದ ಮಾಹಿತಿಯನ್ನು ತನ್ನ ಲ್ಯಾಪ್‌ಟಾಪ್‌ಗೆ ವರ್ಗಾವಣೆ ಮಾಡಿಕೊಂಡಿದ್ದಲ್ಲದೆ, ಎಸ್‌ಬಿಟಿ ಅಸೋಸಿಯೇಟ್ಸ್ ಎಂಬ ಮತ್ತೊಂದು ಕಂಪನಿಗೆ ಇ-ಮೇಲ್ ಮೂಲಕ ಈ ಮಾಹಿತಿಯನ್ನು ವರ್ಗಾವಣೆ ಮಾಡಿ ವ್ಯವಹಾರ ಕುದುರಿಸಿಕೊಳ್ಳಲು ಯತ್ನಿಸುತ್ತಿದ್ದ.
ಈತನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಂಪನಿಯ ವ್ಯವಸ್ಥಾಪಕರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಶ್ರೀಶ ರಾವ್‌ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: