ಕರ್ನಾಟಕ

ಅವೈಜ್ಞಾನಿಕ ರೀತಿಯಲ್ಲಿ ಆನೆ ಕಂದಕ ನಿರ್ಮಾಣ

ರಾಜ್ಯ(ಮಡಿಕೇರಿ),ಜು.4:- ಚೆಟ್ಟಳ್ಳಿ  ಮೀನು ಕೊಲ್ಲಿ ಅರಣ್ಯ ವ್ಯಾಪ್ತಿಯ ಕಂಡೇಕೆರೆ ವಾಲ್ನೂರು ರಸ್ತೆ ಬದಿಯ ಆನೆಕಂದಕ ತೀರಾ ಅವೈಜ್ಞಾನಿಕ ರೀತಿಯಲ್ಲಿ  ನಿರ್ಮಿಸಲಾಗಿದೆ .ಆನೆ ಕಂದಕವನ್ನು ನಿರ್ಮಿಸುವಾಗ ಅದರ ಮಣ್ಣನ್ನು ಅಗೆದು ರಸ್ತೆಯ ಬದಿಯಲ್ಲಿ ಹಾಕಬೇಕೆ ವಿನಹ ಅದನ್ನು ಅರಣ್ಯದ ಬದಿಗೆ ಹಾಕಿದರೆ ಆನೆಗಳು ಅದೇ ಮಣ್ಣನ್ನು ಕಾಲಿನಲ್ಲಿ ಕಂದಕ್ಕಕೆ ಜಾರಿಸಿ ಸುಲಭವಾಗಿ ರಸ್ತೆಗೆ ದಾಟಿ ತೋಟಕ್ಕೆ ನುಗ್ಗುತ್ತದೆ . ಅದರಿಂದ ಇದಕ್ಕೆ ಸಂಬಂಧ ಪಟ್ಟವರು ಇದನ್ನು ಪರಿಶೀಲಿಸಿ ಇನ್ನು ಮುಂದೆಯಾದರೂ ಆನೆ ಯಿಂದ ಆಗುವ ಕಷ್ಟನಷ್ಟವನ್ನು ತಡೆಗಟ್ಟಿ ರೈತರ ಬೆಳೆಯನ್ನು ಉಳಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: