ನಮ್ಮೂರುಮೈಸೂರು

ಹುಲಿ-ರಣಹದ್ದುಗಳ ಜಾಗೃತಿ ಅಭಿಯಾನ : ಬೈಕ್‍ನಲ್ಲಿಯೇ ದೇಶ ಸುತ್ತಿದ ಪೋರ

ಬೆಂಗಳೂರು ಮೂಲದ ಸುಹಾಸ್ “ಹುಲಿ ಮತ್ತು ರಣಹದ್ದುಗಳ” ಸಂರಕ್ಷಣೆಗಾಗಿ ದೇಶಾದ್ಯಂತ ಸಂಚರಿಸಿ ಜಾಗೃತಿ ಅಭಿಯಾನವನ್ನು ಕೈಗೊಂಡಿದ್ದು ಅ.14ರಂದು ನಗರಕ್ಕೆ ಆಗಮಿಸುವರು.

ಸುಹಾಸ್ ಬೆಂಗಳೂರಿನ ಆರ್.ಎನ್.ಎಸ್. ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಶೋಕ್ ಹಾಲ್ಲೂರ್ ಮತ್ತು ಪದ್ಮ ಅಶೋಕ್ ದಂಪತಿ ಸ್ಥಾಪಿಸಿರುವ ‘ಸೇಫ್ ಟೈಗರ್ ಫಸ್ಟ್’ ಸಂಸ್ಥೆಯೊಂದಿಗೆ ಕೈ ಜೋಡಿಸಿ ವನ್ಯ ಜೀವಿಗಳ ಸಂರಕ್ಷಣೆಗಾಗಿ ಬೈಕ್ ಮೂಲಕ ಜಾಗೃತಿ ಅಭಿಯಾನ ಕೈಗೊಂಡಿದ್ದಾನೆ.

ನಗರೀಕರಣ ಹಾಗೂ ಮನುಷ್ಯನ ದುರಾಸೆಯಿಂದ ಕಾಡುಗಳು ನಾಶವಾಗಿ ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರವಾಗಿವೆ ಇದರಿಂದ ಮುಂದಿನ ದಿನಮಾನಗಳಲ್ಲಿ ಪ್ರಾಣಿ-ಪಕ್ಷಿ ಸಂಕುಲಗಳು ನಶಿಸಿ ಪ್ರಕೃತಿ ಅಸಮತೋಲನ ಉಂಟಾಗಲಿದೆ ಈ ನಿಟ್ಟಿನಲ್ಲಿ ವನ್ಯ ಜೀವಿಗಳ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ನಡೆಸಿದ್ದಾನೆ.

ಕಳೆದ ಅ.4ರಿಂದ ಬೆಂಗಳೂರಿನಿಂದ ಪಯಣ ಬೆಳೆಸಿರುವ ಈತ ದೇಶದ ಮುಖ್ಯ ಭಾಗವಾದ ಪೂನಾ, ಮುಂಬೈ, ಗೋವಾ, ಗುಜರಾತ್, ರಾಜ್ಯದ ಕಾರವಾರ, ಮಂಗಳೂರು ಸೇರಿದಂತೆ ಕೇರಳದ ಮೂಲಕ ಕನ್ಯಾಕುಮಾರಿಯ ತಲುಪಿದ್ದು ಅಲ್ಲಿಂದ ಬಂಡೀಪುರದ ಮೂಲಕ ಸಾಂಸ್ಕೃತಿಕ ನಗರ ಮೈಸೂರಿಗೆ ಆಗಮಿಸುತ್ತಿದ್ದಾರೆ. ಇವರು ಬರೋಬ್ಬರಿ ಐದು ಸಾವಿರ ಕಿ.ಮಿ.ಸಂಚಾರಿಸಿ ಜಾಗೃತಿ ಮೂಡಿಸಿದ್ದಾರೆ.ನಗರಕ್ಕಿಂದು ಆಗಮಿಸಲಿರುವ ಸುಹಾಸ್ ಗೆ ಬೆಳಿಗ್ಗೆ 10 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಸ್ವಾಗತ ಕೋರಲು ನಗರದ ವನ್ಯಜೀವಿ ರಕ್ಷಣೆಯ ಹೋರಾಟಗಾರರು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಸುಹಾಸ್ ತಮ್ಮ ಅನುಭವವನ್ನು ಹಂಚಿಕೊಳ್ಳುವರು.

Leave a Reply

comments

Related Articles

error: