ಕರ್ನಾಟಕ

ಗಾಳಿ ಸುದ್ದಿಗೆ ಕಿವಿಕೊಟ್ಟು ಮಾಂಗಲ್ಯ ಸರದಲ್ಲಿರುವ ಹವಳ ಒಡೆಯುತ್ತಿರುವ ಮಹಿಳೆಯರು!

ರಾಜ್ಯ(ಕೊಪ್ಪಳ-ಚಿತ್ರದುರ್ಗ)ಜು.5:- ಗಾಳಿ ಸುದ್ದಿಗೆ ಕಿವಿಗೊಟ್ಟು ಕತ್ತಿನಲ್ಲಿರುವ ತಾಳಿಯ ಗುಂಡನ್ನು  ಮುತ್ತೈದೆಯರು ಒಡೆದು ಹಾಕಿದ ಘಟನೆ ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿನೋಭ ನಗರದ ಮಹಿಳೆಯರು ರಾತ್ರಿ ಇಡೀ ಭಯಬಿದ್ದು, ತಾಳಿಯಲ್ಲಿರುವ ಕೆಂಪು ಮಣಿಯನ್ನು ಒಡೆದು ಹಾಕದಿದ್ದರೆ ನಿಮ್ಮ ತಾಳಿ ಉಳಿಯುವುದಿಲ್ಲ ಎಂದು ಹಬ್ಬಿರುವ ಗಾಳಿ ಸುದ್ದಿಗೆ ಮಹಿಳೆಯರು ಭಯಗೊಂಡಿದ್ದಾರೆ. ಬೇರೆ ಬೇರೆ ಊರುಗಳಲ್ಲಿರುವ ತಮ್ಮ ಸಂಬಂಧಿಕರಿಗರಿಗೆ ಪೋನ್ ಮಾಡಿ  ಕೆಂಪು ಮಣಿ ತೆಗೆಯದಿದ್ದರೆ ಗಂಡ ಸಾಯುತ್ತಾನೆ ಅಂಥ ಭಯದಲ್ಲಿ ವಿಚಾರ ತಿಳಿಸುತ್ತಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ಜಿಲ್ಲಾದ್ಯಂತವೂ ಇದೇ ಗಾಳಿ ಸುದ್ದಿ ಹರಡಿದ್ದು, ಸಮೂಹ ಸನ್ನಿಗೆ ಒಳಗಾದ ಮಹಿಳೆಯರು ತಮ್ಮ ಕತ್ತಿನಲ್ಲಿದ್ದ ತಾಳಿಯಲ್ಲಿರುವ  ಹವಳದ ಮಣಿಗಳನ್ನು ಜಜ್ಜಿ ಪುಡಿ ಮಾಡಿ ಎಸೆಯುತ್ತಿದ್ದಾರೆ. ಜಿಲ್ಲೆಯಾದ್ಯಂತ ಹಬ್ಬಿದ ಗಾಳಿ ಸುದ್ದಿಯಲ್ಲಿ ಯಾರ ಕೊರಳ ಮಣಿಗಳು ಮಾತನಾಡುತ್ತವೋ ಅವರು ಸಾಯುತ್ತಾರೆ ಎಂದು ವದಂತಿ ಹಬ್ಬಿದೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: