ಕರ್ನಾಟಕ

ಪೊಲೀಸರಿಂದಲೆ ಎಸ್ಪಿಗೆ ಮಕ್ಬಲ್ ಹೇಳಿಕೆ!

ರಾಜ್ಯ, (ಚಾಮರಾಜನಗರ) ಜು.5 : ಅರೆ ಇದೇನಿದು ಪೊಲೀಸರಿಂದ ಹಿರಿಯ ಅಧಿಕಾರಿಗಳಿಗೆ ಮಕ್ಬಲ್ ಹೇಳಿಕೆ ಅಂತೀರಾ.!  ಹೌದು ಠಾಣೆಗೆ ಬಂದ ಪ್ರಕರಣಗಳನ್ನು ತರಾತುರಿಯಲ್ಲಿ ಮುಗಿಸಲು ಮುಂದಾಗುತ್ತಿದ್ದು ದೂರುದಾರರಿಗೆ, ಅಧೀಕ್ಷಕರಿಗೆ ತಪ್ಪು ಹಿಂಬರಹ ನೀಡುತ್ತಿದ್ದಾರೆ.  ಪ್ರಕರಣವೊಂದಕ್ಕೆ ದೂರುದಾರ ಸಮರ್ಪಕವಾಗಿ ದಾಖಲೆ ಕೊಟ್ಟರೂ ‌ಕೊಟ್ಟೇ ಇಲ್ಲ .ಇದು ಸಿವಿಲ್ ಪ್ರಕರಣ( ಚೀಟಿಂಗ್ ಪ್ರಕರಣ ಕ್ರಿಮಿನಲ್) ಆದರೂ ನ್ಯಾಯಾಲಯದಲ್ಲಿ‌ ಬಗೆಹರಿಸಿಕೊಳ್ಳಿ ಎಂದು ಉತ್ತರಿಸಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ಹೋಗುವುದು ಸಹಜ.‌ ಆದರೆ ಇಲ್ಲಿ ಅವರೇ ನ್ಯಾಯಾಲಯಕ್ಕೆ ಹೋಗಿ ಎಂದು ಹಿಂಬರಹ ನೀಡುತ್ತಿದ್ದಾರೆ.

ದೂರುದಾರರು ನ್ಯಾಯಕ್ಕಾಗಿ ಬಂದರೆ‌ ಸಮರ್ಪಕವಾಗಿ ವಿವರಣೆ ನೀಡಿ,ವಿಚಾರಣೆ ನಡೆಸದೆ ನ್ಯಾಯಾಲಯದ ದಾರಿ ತೋರಿಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳೇ ನಿಮಗೊಂದು ತಿಳಿದಿರಲಿ‌ ನ್ಯಾಯಕ್ಕಾಗಿ ಬಂದ ವ್ಯಕ್ತಿ ನಿಮ್ಮ ಕಚೇರಿಯ ಬಾಗಿಲು ತಟ್ಟುವ ಮುನ್ನ ಹಿಂಬರಹ ಪರಿಶೀಲಿಸಿ ಎಂಬುದು ದೂರುದಾರರ ವಾದವಾಗಿದೆ.  ಸಮವಸ್ತ್ರ ಧರಿಸದೆ ( KSPU ACT ಎಲ್ಲಿ ಹೋಯಿತು) ಮುಖ್ಯಪೇದೆ ನಡೆಸಿದ ವರದಿಯೆ ಅಂತಿಮವಾದರೆ ಠಾಣೆಗಳು ಯಾತಕ್ಕಾಗಿ ಬೇಕಿದೆ ಎಂಬಂತಾಗಿದೆ. ದೂರುದಾರರೋರ್ವರು ಪ್ರಕರಣಕ್ಕೆ  ಸಂಬಂಧಪಟ್ಟಂತೆ ಪೋಲಿಸರೆ ತೋರಿಸಿದ ಮಾರ್ಗದಂತೆ ನ್ಯಾಯಾಲಯದಲ್ಲಿಯೇ ವರಿಷ್ಠಾಧಿಕಾರಿಯ ವಿರುದ್ದ ಏಕೆ ಪ್ರಕರಣ ದಾಖಲಿಸಬಾರದು ಎಂದು ಚಿಂತನೆ ನಡೆಸಿದ್ದಾರೆ. (ವರದಿ: ಆರ್.ವಿ.ಎಸ್, ಎಲ್.ಜಿ)

Leave a Reply

comments

Related Articles

error: