ಮೈಸೂರು

ಕುಂಚಿಟಿಗರ ಸಂಘಟನಾ ಸಭಾದಿಂದ ಡಿ.ಬನುಮಯ್ಯ ಜಯಂತ್ಯೋತ್ಸವ ಆಚರಣೆ

ಮೈಸೂರು,ಜು.5-ಡಿ.ಬನುಮಯ್ಯ ಅವರ 157ನೇ ಜಯಂತ್ಯೋತ್ಸವವನ್ನು ಕುಂಚಿಟಿಗರ ಸಂಘಟನಾ ಸಭಾದ ವತಿಯಿಂದ ನಗರದ ಡಿ.ಬನುಮಯ್ಯ ಕಾಲೇಜಿನ ಆವರಣದಲ್ಲಿರುವ ಬನುಮಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಆಚರಿಸಲಾಯಿತು.

ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಕಟ್ಟಡ ಕಟ್ಟಲು ಡಿ.ಬನುಮಯ್ಯ ಕುಟುಂಬದವರೇ ಮೂಲ ಕಾರಣಕರ್ತರು. ಹೀಗಾಗಿ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಬನುಮಯ್ಯ ಅವರ ಪುತ್ಥಳಿ ಸ್ಥಾಪಿಸಬೇಕು. ಹಾಗೇ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅಪಾರವಾದ ಸೇವೆಯನ್ನು ಗುರುತಿಸಿ ಡಿ.ಬನುಮಯ್ಯ ವೃತ್ತದಲ್ಲಿ ಬನುಮಯ್ಯ ಅವರ ಪುತ್ಥಳಿ ಸ್ಥಾಪಿಸಬೇಕು ಎಂದು ಎಂದು ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಪ್ರಶಾಂತಗೌಡ ಅವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಬನುಮಯ್ಯ ಅವರ ಮೊಮ್ಮಗ ಜಯದೇವ್, ಸಭಾದ ಗೌರವಾಧ್ಯಕ್ಷ ಎಂ.ಪಿ.ನಾಗರಾಜ್, ಅಧ್ಯಕ್ಷ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಕೆ.ಎಚ್.ಅನಂತಕುಮಾರ್ ಇತರರು ಹಾಜರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

 

Leave a Reply

comments

Related Articles

error: