ಮೈಸೂರು

ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವುದಿದ್ದರೆ ಇಲ್ಲಿರಿ, ಇಲ್ಲವಾದರೆ ಹೊರಗೆ ಹೋಗಿ ವಾರ್ಡನ್ ಗಳನ್ನು ತರಾಟೆಗೆ ತೆಗೆದುಕೊಂಡ ಲೋಬೋ

ಮೈಸೂರು,ಜು.5:-ಮೈಸೂರು ಜಿಲ್ಲಾ ಪಂಚಾಯತ್ ಕಚೇರಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಆಗಮಿಸಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.

ಜಿಲ್ಲಾ ಪಂಚಾಯತ್  ಕಚೇರಿಯಲ್ಲಿ ಸಮಿತಿ ಅಧ್ಯಕ್ಷ ಜೆ.ಆರ್.ಲೋಬೋ ನೇತೃತ್ವದಲ್ಲಿ ಅಧಿಕಾರಿಗಳ ಸಭೆ  ನಡೆಯುತ್ತಿದ್ದು, ಅಧ್ಯಕ್ಷರು ಮೈಸೂರು ಜಿಲ್ಲೆ ಹಿಂದುಳಿದ ದೇವರಾಜ ಅರಸು ಹಾಸ್ಟೆಲ್ ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶ ಕುಸಿತ  ಹಿನ್ನಲೆಯಲ್ಲಿ ಹಾಸ್ಟೇಲ್ ವಾರ್ಡನ್,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಸ್ಟೇಲ್ ಗೆ ವಿದ್ಯಾರ್ಥಿಗಳು ಬರೋದು ನಿಮ್ಮಂತೆ ಉತ್ತಮ ಅಧಿಕಾರಿಗಳಾಗೋಕೆ. ಫೇಲ್ ಆಗಿ ಮನೆ ಸೇರಿಕೊಂಡರೆ ಬಡ ವಿದ್ಯಾರ್ಥಿಗಳ ಸ್ಥಿತಿ ಏನು ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯಲು, ಫೇಲ್ ಆಗಲು  ಕಾರಣವೇನು. ಹಾಸ್ಟೇಲ್ ಇರುವುದರಿಂದ ಅಲ್ಲವೇ ನೀವು ಅಧಿಕಾರಿ ಅಂತ ಇರೋದು. ಫಲಿತಾಂಶ ಹೆಚ್ಚಿಸಿದರೆ ಇಲ್ಲಿ ಇರಿ ಇಲ್ಲ ಅಂದರೆ ಇಲಾಖೆಯಿಂದ ಹೊರಗೆ ಹೋಗಿ ಎಂದು ಅಧ್ಯಕ್ಷ ಲೋಬೋ,ಸದಸ್ಯ ಮಂಕಾಳ ಸುಬ್ಬ ವೈದ್ಯ ಹಾಸ್ಟೇಲ್ ವಾರ್ಡನ್ ಗಳನ್ನು ತರಾಟೆಗೆ ತೆಗೆದುಕೊಂಡರು

ಸಭೆಯಲ್ಲಿ  ರಾಜ್ಯ ವಿಧಾನ ಮಂಡಲ ಸಮಿತಿ ಸದಸ್ಯರಾದ ಪಿ.ಎಂ ನರೇಂದ್ರಸ್ವಾಮಿ, ಸತೀಶ್ ಲಕ್ಷ್ಮರಾವ್ ಜಾರಕಿಹೊಳಿ, ಎಂ.ಡಿ.ಲಕ್ಷ್ಮಿನಾರಾಯಣ, ಕೆ.ಅಬ್ದುಲ್ ಜಬ್ಬಾರ್, ಸೈಯದ್ ಮುದೀರ್ ಆಗಾ, ಬಿ.ಜಿ.ಪಾಟೀಲ್, ಸುನೀಲ್ ಸುಬ್ರಮಣಿ,  ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಡಿಸಿಪಿ ವಿಕ್ರಂ ಆಮ್ಟೆ, ಮಹಾನಗರಪಾಲಿಕೆ ಆಯುಕ್ತ ಜಿ.ಜಗದೀಶ್ ಸೇರಿದಂತೆ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: