ದೇಶ

ಫೇಸ್‌ಬುಕ್ ಸ್ನೇಹಿತನ ಜೊತೆ ಮದುವೆ ಕೊನೆಗೆ ಏನಾಯ್ತು ಗೊತ್ತಾ..!

ಚೆನ್ನೈ, ಜುಲೈ.5:   ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದ ಹುಡುಗನೊಂದಿಗೆ ಪ್ರೀತಿಸಿ ಮದುವೆಯಾದ ಕಾಲೇಜು ಹುಡುಗಿ ಬೆಂಕಿಗಾಹುತಿಯಾದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುಟಿಯಲ್ಲಿ ನಡೆದಿದೆ.

23 ವರ್ಷದ ವಿದ್ಯಾರ್ಥಿನಿಗೆ ಸೇಲಂನ ನಾರಾಯಣನ್ ಎಂಬಾತ ವರ್ಷದ ಹಿಂದೆ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದು ಮದುವೆಯಾಗಲು ನಿರ್ಧರಿಸಿದ್ದರು. ಜೂನ್‌ 29ರಂದು ಇಬ್ಬರೂ ಮಧುರೈನಲ್ಲಿ ಭೇಟಿಯಾಗಿ ತಂಜಾವೂರು ಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಯೋಚಿಸಿದ್ದಾರೆ. ಇದರ ನಡುವೆಯೇ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಮದುವೆಯಾದ ಸ್ಪಲ್ಪದಿನಗಳ ನಂತರ  ಇಬ್ಬರು ಒಟ್ಟಿಗೆ ಬಾಳುವುದು ಕಷ್ಟ. ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಾರಾಯಣ ಪತ್ನಿಗೆ ಸಲಹೆ ನೀಡಿದ್ದಾನೆ. ಅಂತೆಯೇ ಕನಚವಾಡಿ ಎನ್ನೋ ಗ್ರಾಮದ ಬಳಿ ಆತ್ಮಹತ್ಯೆಯ ಭಾಗವಾಗಿ ಪತ್ನಿಗೆ ಬೆಂಕಿ ಹಚ್ಚಿದ ನಾರಾಯಣನ್ ತಾನು ಬೆಂಕಿ ಹಚ್ಚಿಕೊಳ್ಳದೇ ಅಲ್ಲಿಂದ ಕಾರಿನಲ್ಲಿ ಎಸ್ಕೇಪ್ ಆಗಿದ್ದಾನೆ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ನಾರಾಯಣನನ್ನು ಆತನನ್ನು ಬಂಧಿಸುವುದಾಗಿ ಹೇಳುತ್ತಿದ್ದಾರೆ. (ಪಿ.ಜೆ)

Leave a Reply

comments

Related Articles

error: