ಮೈಸೂರು

ಬೆಳಕು ಸಂಸ್ಥೆಯಿಂದ ಜಿಎಸ್ ಟಿ ಕುರಿತು ಜನಜಾಗೃತಿ ಅಭಿಯಾನ

ಮೈಸೂರು,ಜು.5-ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕರೂಪ ತೆರಿಗೆ ಪದ್ಧತಿಯಾದ ಜಿಎಸ್ ಟಿಯ ಬಗ್ಗೆ ಬೆಳಕು ಸಂಸ್ಥೆಯವರು ಬುಧವಾರ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಬೆಳಕು ಸಂಸ್ಥೆಯವರು ಹಮ್ಮಿಕೊಂಡಿದ್ದ ಜನಜಾಗೃತಿ ಅಭಿಯಾನದಲ್ಲಿ ಕೇಂದ್ರ ಸರ್ಕಾರ ಬಿಡುಗಗಡೆ ಮಾಡಿರುವ ಜಿಎಸ್ ಟಿ ಬಗೆಗಿನ ವಿಸ್ತೃತ ವಿವರವಿರುವ ಕೈಪಿಡಿಯನ್ನು ನಗರದ ಅಗ್ರಹಾರದಲ್ಲಿರುವ ವಾಣಿಜ್ಯ ಮಳಿಗಳಿಗೆ ತೆರಳಿ ಅಲ್ಲಿನ ವರ್ತಕರಿಗೆ ಹಾಗೂ ಗ್ರಾಹಕರಿಗೆ ನೀಡಿ ಜಿಎಸ್ ಟಿ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಅಭಿಯಾನಕ್ಕೆ ಮೈಸೂರು ವಿಭಾಗದ ಬಿಜೆಪಿ ಸಹ ಪ್ರಭಾರಿಗಳಾದ ಫಣೀಶ್ ಹಾಗೂ ಬೆಳಕು ಸಂಸ್ಥೆಯ ಸಂಚಾಲಕ ಕೆ.ಎಂ.ನಿಶಾಂತ್ ಚಾಲನೆ ನೀಡಿದರು.

ಜಿಎಸ್ ಟಿ ಜಾರಿಗೆ ಬಂದು 5 ದಿನಗಳು ಕಳೆದರೂ ಇದರ ಸಂಪೂರ್ಣ ಅರಿವು ಸಾರ್ವಜನಿಕರಿಗಿಲ್ಲ. ದೈನಂದಿನ ಜೀವನದಲ್ಲಿ ಬಳಸುತ್ತಿರುವ ಗೃಹಬಳಕೆ ವಸ್ತುಗಳ ಜಿಎಸ್ ಟಿ ದರಗಳ ಬಗ್ಗೆ ಸಾಕಷ್ಟು ಗೊಂದಲಗಳು ಸಾರ್ವಜನಿಕ ವಲಯದಲ್ಲಿ ಮೂಡಿದೆ. ಹೀಗಾಗಿ ಈ ಜನಜಾಗೃತಿ ಅಭಿಯಾನವನ್ನು ಬೆಳಕು ಸಂಸ್ಥೆಯವರು ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಬೆಳಕು ಸಂಸ್ಥೆಯ ಸಹ ಸಂಚಾಲಕ ಧನುಷ್, ವಿನಯ್, ಸುಭಾಷ್, ಅಕ್ಷಯ್, ಸಂತೋಷ್, ದೀಪಕ್, ಪ್ರವೀಣ್, ಗಣೇಶ್ ಹಾಜರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

 

Leave a Reply

comments

Related Articles

error: