ಸುದ್ದಿ ಸಂಕ್ಷಿಪ್ತ

ಅರ್ಜಿ ಸಲ್ಲಿಕೆ

ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ಅಧ್ಯಯನ ವಿಭಾಗಕ್ಕೆ ಭಾರತ ಸರ್ಕಾರವು ಐ.ಸಿ.ಎಸ್.ಎಸ್.ಆರ್ ಸಂಸ್ಥೆಯು ‘ಕರ್ನಾಟಕದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿನ ಸ್ಥಿತಿಗತಿಗಳು’ ಈ ವಿಷಯ ಕುರಿತು 18 ತಿಂಗಳ ಸಂಶೋಧನಾ ಯೋಜನೆ  ಮಂಜೂರು ಮಾಡಿದೆ. ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಒಬ್ಬ ಸಹಾಯಕ ಸಂಶೋಧಕರನ್ನು 18 ತಿಂಗಳ ಅವಧಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಸ್ನಾತಕೋತ್ತರ ಕಾನೂನು ಪದವಿ ಪಡೆದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಸಹಾಯಕ ಸಂಶೋಧಕ ಹುದ್ದೆಗೆ ಪ್ರತಿ ತಿಂಗಳಿಗೆ 13,000 ವೇತನ ನೀಡಲಾಗುತ್ತದೆ. ಹಾಗೂ ಕ್ಷೇತ್ರ ಕಾರ್ಯದ ಸಮಯದಲ್ಲಿ ಪ್ರತ್ಯೇಕವಾಗಿ ಪ್ರಯಾಣ ಭತ್ಯೆ/ದಿನ ಭತ್ಯೆ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರದೊಂದಿಗೆ ಅರ್ಜಿಯನ್ನು ನೋಂದಾಯಿತ ಅಂಚೆ/ಕೊರಿಯರ್ ಮೂಲಕ ಅ.30 ರೊಳಗೆ ಡಾ.ರಮೇಶ್, ಯೋಜನೆ ನಿರ್ದೇಶಕರು, ಕಾನೂನು ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ , ಮೈಸೂರು-570006 ಈ ವಿಳಾಸಕ್ಕೆ ಕಳುಹಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ 9448801121 ಗೆ ಸಂಪರ್ಕಿಸಬಹುದಾಗಿದೆ ಮತ್ತು ವಿಶ್ವವಿದ್ಯಾನಿಲಯದ ವೆಬ್ ಸೈಟ್ ನ್ನು ನೋಡಬಹದು.

 

Leave a Reply

comments

Related Articles

error: