ಮೈಸೂರು

ಅಗರ್‌ವಾಲ್ ಆಸ್ಪತ್ರೆಯಿಂದ ಗ್ಲಾಕೋಮಾ ಯಶಸ್ವಿ ಶಸ್ತ್ರ ಚಿಕಿತ್ಸೆ

ಮೈಸೂರು, ಜು.೫: ಡಾ.ಅಗರ್‌ವಾಲ್ ಆಸ್ಪತ್ರೆ ರಾಜ್ಯದಲ್ಲೆ ಮೊದಲ ಬಾರಿಗೆ ಗ್ಲಾಕೋಮಾ ರೋಗವನ್ನು ನೂತನ ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಿ ಸಾಧನೆ ಮಾಡಿದೆ ಎಂದು ಹಿರಿಯ ತಜ್ಞ ಡಾ.ಪ್ರವೀಣ್ ಎಸ್ ಅಳವಂಡಿ ತಿಳಿಸಿದರು.
ಬುಧವಾರ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಅಗರ್‌ವಾಲ್ ಆಸ್ಪತ್ರೆ ವಿಶಿಷ್ಟ ಸಾಧನೆ ಮಾಡಿದೆ. ಮೊದಲ ಬಾರಿಗೆ ಆಂಗಲ್ ಕ್ಲೋಷರ್ ಗ್ಲಾಕೋಮಾ ಚಿಕಿತ್ಸೆಗಾಗಿ ಸಿಂಗಲ್ ಪಾಸ್ ಫೋರ್ ಥ್ರೋ (ಎಸ್‌ಎಫ್‌ಟಿ) ಪ್ಯೋಪಿಲೋಪ್ಲಾಸ್ಟಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಕಾಯಿಲೆಗೆ ಒಳಗಾಗಿದ್ದ ನಂಜನಗೂಡು ತಾಲೂಕಿನ ಆಲತ್ತೂರಿನ ಲಕ್ಷ್ಮಿ ಎಂಬುವವರಿಗೆ ಯಶಸ್ವಿ ಚಿಕಿತ್ಸೆ ನಡೆಸಲಾಗಿದ್ದು, ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ದೃಷ್ಟಿದೋಷ ನಿವಾರಣೆಯಾಗಿ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿದೆ. ಮಂದ ದೃಷ್ಟಿ ದೋಷ ಹಾಗೂ ವಿಪರೀತ ತಲೆನೋವಿನಿಂದ ಬಳಲುತ್ತಿದ್ದು ನಮ್ಮ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಸುಮಾರು ೧.೪ ಕೋಟಿ ಜನ ಗ್ಲಾಕೋಮಾದಿಂದ ಬಳಲುತ್ತಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿದ್ದು ನಿರ್ಲಕ್ಷ್ಯ ಮಾಡಿದರೆ ಅಂಧತ್ವವೇ ಹೋಗುವ ಸಂಭವ ಹೆಚ್ಚು. ಹಾಗಾಗಿ ಕಣ್ಣಿನ ಸಮಸ್ಯೆ ಇರುವವರು ನಿರ್ಲಕ್ಷ್ಯ ಮಾಡದೆ ಕೂಡಲೇ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ. ಕಣ್ಣಿನ ಬಗೆಗೆ ಕಾಳಜಿ ಇರಲಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ನಾರಾಯಣ ಮೂರ್ತಿ, ಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: