ಸುದ್ದಿ ಸಂಕ್ಷಿಪ್ತ

ಮೀನುಗಾರಿಕೆ ತರಬೇತಿ ಅರ್ಜಿ ಆಹ್ವಾನ

ಮೈಸೂರು,ಜು.5-ಮಂಡ್ಯ ಜಿಲ್ಲೆ ಕೃಷ್ಣರಾಜ ಸಾಗರ ಕಚೇರಿ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ_1) ತರಬೇತಿ ಕೇಂದ್ರ ವತಿಯಿಂದ 2017-18ನೇ ಸಾಲಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಒಂದು ತಿಂಗಳ ಮೀನುಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜು.22 ರೊಳಗೆ ಸಲ್ಲಿಸಬಹುದು.    ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ_1), ತರಬೇತಿ ಕೇಂದ್ರ, ಕೆ.ಆರ್.ಸಾಗರ, ಮಂಡ್ಯ ಜಿಲ್ಲೆ ಇಲ್ಲಿ ಸಂಪರ್ಕಿಸಬಹುದು. (ವರದಿ-ಎಂ.ಎನ್)

Leave a Reply

comments

Related Articles

error: