ಸುದ್ದಿ ಸಂಕ್ಷಿಪ್ತ

ಜು.6ಕ್ಕೆ ವಿದ್ಯುತ್ ನಿಲುಗಡೆ

ಮೈಸೂರು,ಜು.5- ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಾಗೂ 66/11 ಕೆ.ವಿ. ದಕ್ಷಿಣ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಎಲ್.ಎಫ್-3 ಮತ್ತು ಲಕ್ಷ್ಮೀಪುರಂ  ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಹೀಗಾಗಿ ಜು.6 ರಂದು ಬೆಳಿಗ್ಗೆ 10 ರಿಂದ 6 ರವರೆಗೆ ವಾಜಮಂಗಲ, ಬುಗತಗಳ್ಳಿ, ಚಿಕ್ಕಹಳ್ಳಿ, ಚೋರನಹಳ್ಳಿ, ಯಾಂದಹಳ್ಳಿ, ವರುಣಾ, ದಂಡಿಕೆರೆ, ಮೊಸಂಬಾಯನಹಳ್ಳಿ, ಜಂತಗಳ್ಳಿ, ಸಜ್ಜೆಹುಂಡಿ, ವರಕೂಡು, ಕೆಂಪೆಗೌಡನಹುಂಡಿ, ಬಡಗಲಹುಂಡಿ, ಮೂಡ್ಲಹುಂಡಿ, ಪಿಲ್ಲಹಳ್ಳಿ, ಹೊಸಕೋಟೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪುಟ್ಟೇಗೌಡನಹುಂಡಿ, ಚಟ್ಟನಹಳ್ಳಿ ಪಾಳ್ಯ, ಎಟಿಎಂಇ ಇಂಜಿನಿಯರಿಂಗ್ ಕಾಲೇಜು, ರಾಮಾಶ್ರಯ ಪಾರಂ, ಬನ್ನೂರು ರಸ್ತೆ, ಇಂಡಸ್ಟ್ರೀಯಲ್ ಏರಿಯಾ, ವಿಶ್ವೇಶ್ವರನಗರ, ಮಾನಂದವಾಡಿ ರಸ್ತೆ, ಎನ್.ಐ.ಇ. ಕಾಲೇಜು, ಎಸ್.ಜಿ.ಹೆಚ್. ರಸ್ತೆ, ಮಹಾಲಕ್ಷ್ಮೀ ಸ್ವೀಟ್ಸ್, ಜೆ.ಎಲ್.ಬಿ. ರಸ್ತೆ, ರಾಮಕೃಷ್ಣ ಹಾಸ್ಟಿಟಲ್, ವಿದ್ಯಾರಣ್ಯಪುರಂ, ಪೋಸ್ಟ್ ಆಫೀಸ್, ಸಿಲ್ಕ್ ಫ್ಯಾಕ್ಟರಿ, ಜಿ.ಎಸ್.ಆರ್.ಟಿ.ಐ ಕಾಲೋನಿ, ಫೈವ್ ಲೈಟ್ ಸರ್ಕಲ್, ತುಳಸಿ ಹಾಸ್ಪಿಟಲ್, ನಂಜುಮಳಿಗೆ ಸರ್ಕಲ್, ಲಕ್ಷ್ಮೀಪುರಂ ಜೈನ್‍ಭವನ್, ಕಾಕರವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪ್ರಕಟಣೆ ತಿಳಿಸಿದೆ. (ವರದಿ-ಎಂ.ಎನ್)

Leave a Reply

comments

Related Articles

error: