ಸುದ್ದಿ ಸಂಕ್ಷಿಪ್ತ

 ಕನ್ನಡ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಮೈಸೂರು,ಜು.5-ಕನ್ನಡ ಸಾಹಿತ್ಯ ಪರಿಷತ್ತು 2017ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸುವ ಕನ್ನಡ ಪ್ರವೇಶ, ಕಾವ ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದೆ.

ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದ್ದು, ಸೆಪ್ಟೆಂಬರ್ 15 ರವರೆಗೆ ದಂಡ ಶುಲ್ಕ 50 ರೂ. ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು. 25 ರೂ. ಶುಲ್ಕ ಪಾವತಿಸಿ ಪರೀಕ್ಷಾ ನಿಯಾಮಾವಳಿ ಹಾಗೂ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ ಅಥವಾ www.kasapa.in ಮೂಲಕ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ 30 ರೂ. ಮನಿ ಆರ್ಡರ್ ಮಾಡಿದರೆ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂ.ಸಂ. 080-26623584 ಸಂಪರ್ಕಿಸಬಹುದು. (ವರದಿ-ಎಂ.ಎನ್)

Leave a Reply

comments

Related Articles

error: