ಮೈಸೂರು

ಮುಂದುವರಿದ ಮೋಡ ಕವಿದ ವಾತಾವರಣ

ಮೈಸೂರಿನಲ್ಲಿ ತುಂತುರು ಮಳೆ ಮುಂದುವರಿದಿದೆ. ಗುರುವಾರ ರಾತ್ರಿಯೂ ಮೈಸೂರು ಜಿಲ್ಲೆಯ ಅಲ್ಲಲ್ಲಿ ಮಳೆಯಾಗಿದೆ. ಶುಕ್ರವಾರ ಬೆಳಿಗ್ಗೆ  ದಟ್ಟವಾಗಿ ಮಂಜು ಮುಸುಕಿರುವುದು ಕಂಡು ಬಂದಿದ್ದು, ಮೋಡ ಕವಿದ ವಾತಾವರಣವಿದೆ.

ಮೈಸೂರು ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಹೂನಗು ಅರಳಿದೆ. ಮುಂದಿನ 48 ಗಂಟೆಗಳಲ್ಲಿ ಶುಕ್ರವಾರ ಮಧ್ಯಾಹ್ನದ ನಂತರ ಉಷ್ಣಾಂಶ 28 ಡಿಗ್ರಿ ಸೆಲ್ಶಿಯಸ್,  ಸಾಯಂಕಾಲ 21 ಡಿಗ್ರಿ ಸೆಲ್ಶಿಯಸ್ ಇರಲಿದೆ. ಪ್ರಸ್ತುತ ಉಷ್ಣಾಂಶ 24 ಡಿಗ್ರಿ ಸೆಲ್ಶಿಯಸ್ ಇದೆ.

ಮುಂದಿನ 48ಗಂಟೆಗಳಲ್ಲಿ ಗಾಳಿಯ ವೇಗ ಪ್ರತಿಗಂಟೆಗೆ 11ಕಿ.ಮೀ. ವಾತಾವರಣದಲ್ಲಿನ ತೇವಾಂಶ  ಮಧ್ಯಾಹ್ನದ ಬಳಿಕ 56%, ಸಾಯಂಕಾಲ 87%. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Reply

comments

Related Articles

error: