ಮನರಂಜನೆ

‘ರಾಜಕುಮಾರ’ ಶತದಿನ ಪೂರೈಸಿದ ಸಂಭ್ರಮ: ಜುಲೈ 7 ಕ್ಕೆ ಶತದಿನೋತ್ಸವ ಸಮಾರಂಭ

ಬೆಂಗಳೂರು, ಜು.5: ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ  ತುಂಬಾ ಸದ್ದು ಮಾಡುತ್ತಿರುವ ಚಿತ್ರ ‘ರಾಜಕುಮಾರ’. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಈ ‘ರಾಜಕುಮಾರ’ ಚಿತ್ರ ಇದೀಗ ನೂರು ದಿನಗಳನ್ನು ಪೂರೈಸಿದೆ.

ಮಾರ್ಚ್ 24ರಂದು ತೆರೆ ಕಂಡಿದ್ದ ‘ರಾಜಕುಮಾರ’ ಚಿತ್ರ  ಚಕ್ರವರ್ತಿ, ಹೆಬ್ಬುಲಿ, ಬಾಹುಬಲಿಯಂತಹ ಚಿತ್ರಗಳ ನಡುವೆಯೂ  ಸವಾರಿ ಶತ ದಿನಗಳ ಪ್ರದರ್ಶನವನ್ನು ಪೂರೈಸಿದೆ. ಈ ಸಾಧನೆಯ ಯಶಸ್ಸಿನ ಸಂಭ್ರದಲ್ಲಿರುವ ಚಿತ್ರತಂಡ  ಜುಲೈ 7 ರಂದು ಶತದಿನೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದೆ.ಅಂದು  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಶತದಿನೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವೂ ಇದೆ. ಕನ್ನಡ ಚಿತ್ರರಂಗಕ್ಕೆ ದುಡಿದವರನ್ನು ಸನ್ಮಾನಿಸಲಾಗುತ್ತದೆ ಎಂದು ದೊಡ್ಮನೆ ಮೂಲಗಳು ತಿಳಿಸಿವೆ.

ಕನ್ನಡ ಸಿನಿಮಾ ರಂಗದ ಇತಿಹಾಸದಲ್ಲೇ ಅದ್ಧೂರಿ ಸಮಾರಂಭ ಇದಾಗಲಿದ್ದು, ಇದಕ್ಕಾಗಿಯೇ ಸುಮಾರು 60 ಲಕ್ಷ ರೂಪಾಯಿ ಬಜೆಟ್ ನಿಗದಿಪಡಿಸಲಾಗಿದೆಯಂತೆ. ಈಗಾಗಲೇ ‘ರಾಜಕುಮಾರ’ ಚಿತ್ರತಂಡ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. (ವರದಿ: ಎಲ್.ಜಿ)

 

 

Leave a Reply

comments

Related Articles

error: