ಕರ್ನಾಟಕ

ಎರಡು ತಲೆ ಮೂರು ಕಣ್ಣುಳ್ಳ ವಿಚಿತ್ರ ಕರು ಜನನ

ರಾಜ್ಯ, (ರಾಮನಗರ) ಜು.5: ರೈತರೊಬ್ಬರ ಹಸುವೊಂದು ಎರಡು ತಲೆ ಹಾಗೂ ಮೂರು ಕಣ್ಣುಳ್ಳ ಕರುವೊಂದಕ್ಕೆ ಜನ್ಮ ನೀಡಿ ವಿಸ್ಮಯಕಾರಿ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಿಡಗೋಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಪುಟ್ಟೇಗೌಡ ಎಂಬುವರ ಕೊಟ್ಟಿಗೆಯಲ್ಲಿ ಸೀಮೆ ಹಸು ಕರುವಿಗೆ ಜನ್ಮ ನೀಡಿದ್ದು, ಎರಡು ತಲೆ ಹಾಗೂ ಮೂರು ಕಣ್ಣನ್ನು ಹೊಂದಿರುವುದನ್ನು ನೋಡಿದ ಪುಟ್ಟೇಗೌಡರ ಕುಟುಂಬದವರು ಅಚ್ಚರಿಪಟ್ಟಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ನಿಡಗೋಡಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಗುಂಪು- ಗುಂಪಾಗಿ ಬಂದು ಸೃಷ್ಠಿಯ ವಿಸ್ಮಯವನ್ನು ಕಂಡು ಬೆರಗಾಗಿದ್ದಾರೆ. ಕರು ಹಾಗೂ ಹಸು ಆರೋಗ್ಯಕರವಾಗಿದ್ದು, ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಕರುವಿನ ಆರೋಗ್ಯ ತಪಾಸಣೆ ಮಾಡಿದರು. (ವರದಿ: ಎಲ್.ಜಿ)

Leave a Reply

comments

Related Articles

error: