ಕರ್ನಾಟಕ

ಸ್ಕೂಟರ್ ಗೆ ಲಾರಿ ಡಿಕ್ಕಿ : ಸಾವು

ರಾಜ್ಯ(ಬೆಂಗಳೂರು)ಜು.5:- ವೇಗವಾಗಿ ಬಂದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ವ್ಯಾಪಾರಿಯೋರ್ವರು ಮೃತಪಟ್ಟಿರುವ ದುರ್ಘಟನೆ ಕಲಾಸಿಪಾಳ್ಯದ ಎ.ಎಂ. ರಸ್ತೆಯಲ್ಲಿ ನಡೆದಿದೆ.

ಮೃತನನ್ನು ಕಲಾಸಿಪಾಳ್ಯದ ರಸೂಲ್‌ಖಾನ್ (51) ಎಂದು ಗುರುತಿಸಲಾಗಿದೆ.  ಜೆಸಿ ರಸ್ತೆಯ ಬಳಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ರಸೂಲ್‌ಖಾನ್  ಎಎಂ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಕಾಲು ಮುರಿದು ಅಸ್ವಸ್ಥಗೊಂಡಿದ್ದರು. ಕೂಡಲೇ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅತೀವ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ವಿಶ್ವೇಶ್ವರಪುರಂ ಸಂಚಾರಿ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶೋಭಾ ರಾಣಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: