ಮೈಸೂರು

ದರ್ಬಾರ್ ಹಾಲ್‍ನಲ್ಲಿ ಕಸದ ರಾಶಿ: ಯದುವೀರ್ ತೀವ್ರ ಆಕ್ರೋಶ

ದಸರಾ ಸಮಯದಲ್ಲಿ ಝಗಮಗಿಸುತ್ತಿದ್ದ ಅರಮನೆಯಲ್ಲಿ ಜಂಬೂ ಸವಾರಿ ಬಳಿಕ ಎಲ್ಲಿ ನೋಡಿದರೂ ಕಸದ ರಾಶಿ. ಅರಮನೆ ಆವರಣದಲ್ಲಿರುವ ಕಸದ ರಾಶಿಯ ಫೋಟೊವನ್ನು ಮಹರಾಜ ಯದುವೀರ್ ಫೇಸ್‍ಬುಕ್‍ ಇನ್‍ಫೋಗ್ರಾಮ್‍ನಲ್ಲಿ ಪ್ರಕಟಿಸಿದ್ದು, ಜನರ ಈ ರೀತಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಮನೆಯ ದರ್ಬಾರ್ ಹಾಲ್‍ನಲ್ಲಿ ಕುಳಿತು ಜಂಬೂ ಸವಾರಿ ವೀಕ್ಷಿಸಿದ ವಿವಿಐಪಿಗಳು ಮತ್ತು ಅವರ ಕುಟುಂಬದ ಸದಸ್ಯರು ತಿಂಡಿ ತಿಂದು ಪ್ಲಾಸ್ಟಿಕ್ ಕವರ್, ಕಸಗಳನ್ನೆಲ್ಲ ಅಲ್ಲೇ ಎಸೆದು ಹೋಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಕಾರಣವಾಗುತ್ತಿದ್ದಂತೆ ಯದುವೀರ್‍ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದೇಶದಲ್ಲೇ ಸ್ವಚ್ಛನಗರಿಗಳ ಪಟ್ಟಿಯಲ್ಲಿ ಎರಡು ವರ್ಷಗಳಿಂದ ಅಗ್ರ ಸ್ಥಾನದಲ್ಲಿರುವ ಮೈಸೂರಿನ ಪ್ರಸಿದ್ಧ ಅರಮನೆಯಲ್ಲಿ ಈ ರೀತಿ ಕಸದ ರಾಶಿ ಬಿಸಾಕಿರುವುದು ಸರಿಯಲ್ಲ. ದರ್ಬಾರ್‍ ಹಾಲ್‍ಗೆ ತನ್ನದೇ ಆದ ಘನತೆ ಗೌರವವಿದೆ. ಅದೇನು ಚಿತ್ರಮಂದಿರವಲ್ಲ. ಅರಮನೆ ಬಗ್ಗೆ ಗೌರವವಿರುವವರು ದರ್ಬಾರ್‍ ಹಾಲ್‍ಗೆ ತಿಂಡಿಯೇ ತೆಗೆದುಕೊಂಡು ಬರುತ್ತಿರಲಿಲ್ಲ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಚಿತ್ರಮಂದಿರದಲ್ಲೂ ಕಸ ಹಾಕುವುದು ಸರಿಯಲ್ಲ. ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ಸ್ವಚ್ಛ ನಗರಿ ಎಂದು ಹೆಸರು ಮಾಡಿರುವ ನಗರವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಯದುವೀರ್ ಅವರು ಹೇಳಿದ್ದಾರೆ.

Leave a Reply

comments

Related Articles

error: