ಮೈಸೂರು

ಆಧಾರ್ ಅಪ್‌ಡೇಶನ್ ಸೇವೆಗೆ ಚಾಲನೆ

ಮೈಸೂರು, ಜು.೫: ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಅಂಚೆ ಇಲಾಖೆಯ ಸಹಯೋಗದೊಂದಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಧಾರ್ ಅಪ್‌ಡೇಶನ್ ಸೇವೆಗೆ ಬುಧವಾರ ಚಾಲನೆ ದೊರೆಯಿತು.
ಯಾದವಗಿರಿ ಉಪ-ಅಂಚೆ ಕಚೆರಿ ಮತ್ತು ಮೈಸೂರು ಮುಖ್ಯ ಅಂಚೆ ಕಚೆರಿಗಳಲ್ಲಿ ಮೈಸೂರು ಅಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಡಿ.ಶಿವಯ್ಯ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪ್ರಸ್ತುತ ಮೈಸೂರು ಅಂಚೆ ವಿಭಾಗದ ವ್ಯಾಪ್ತಿಗೆ ಬರುವ ೧೪ ಅಂಚೆ ಕಚೆರಿಗಳಲ್ಲಿ ಈ ಸೇವೆ ದೊರೆಯಲಿದ್ದು, ಪ್ರಾರಂಭಿಕವಾಗಿ ಆಧಾರ್ ಜನಸಂಖ್ಯಾ ಡೆಟಾವನ್ನು ಮಾತ್ರ ಅಪ್ಡೇಟ್ ಮಾಡಲಾಗುವುದು. ಹೆಸರು, ವಿಳಾಸ, ಜನ್ಮ ದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಅಂಚೆ ಕಚೇರಿಗಳ ಮೂಲಕ ಅಪ್‌ಡೇಟ್ ಮಾಡಬಹುದಾಗಿದೆ. ಸಾರ್ವಜನಿಕರು ಸಂಬಂಧಪಟ್ಟ ದಾಖಲಾತಿಯೊಂದಿಗೆ ಮೈಸೂರು ಮುಖ್ಯ ಆಂಚೆ ಕಚೇರಿ, ಸರಸ್ವತಿಪುರಂ ಮುಖ್ಯ ಆಂಚೆ ಕಚೇರಿ , ಲಕ್ಶ್ಮೀಪುರಂ, ಇಟ್ಟಿಗೆಗೂಡು, ಮಾನಸಗಂಗೋತ್ರಿ, ಮೇಟಗಳ್ಳಿ, ಉದಯಗಿರಿ, ವಾಣಿ ವಿಲಾಸ ಮೊಹಲ್ಲಾ, ಯಾದವಗಿರಿ, ಕುವೆಂಪುನಗರ, ಹೆಗ್ಗಡದೇವನಕೋಟೆ, ಹುಣಸೂರು, ಕೆ.ಆರ್. ನಗರ ಹಾಗೂ ಪಿರಿಯಾಪಟ್ಟಣ ಅಂಚೆ ಕಚೇರಿಗಳಲ್ಲಿ ಈ ಸೇವೆಯನ್ನು ಪಡೆಯಬಹುದು.
ಈ ಸಂದರ್ಭ ಅಧಿಕಾರಿಗಳು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: