ಪ್ರಮುಖ ಸುದ್ದಿಮೈಸೂರು

ಮತ್ತೆ ಗರಿಗೆದರಲಿದೆ ಸಾಂಸ್ಕೃತಿಕ ಲೋಕ : ವಸ್ತು ಪ್ರದರ್ಶನದಲ್ಲಿ ಕಲಾರಾಧಕರಿಗಾಗಿ ವೈವಿಧ್ಯಮಯ ಕಾರ್ಯಕ್ರಮ

ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾವತ್ತೂ ಕೊರತೆ ಇಲ್ಲ. ನಗರದಲ್ಲಿ ಅಥವಾ ನಗರದ ಆಸುಪಾಸು ಯಾವತ್ತೂ ಏನಾದರೂ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ದಸರಾ ಉತ್ಸವ ಪ್ರಯುಕ್ತ ನಗರದಲ್ಲಿನ ವಿವಿಧ ವೇದಿಕೆಗಳಲ್ಲಿ ಪ್ರತಿದಿನವೂ ನಾಟಕ, ನೃತ್ಯ, ಜಾನಪದ ಗೀತೆಗಳ ಗಾಯನ, ಯುವ ದಸರಾ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಿದ್ದು, ಪ್ರೇಕ್ಷಕರನ್ನು ರಂಜಿಸಿದ್ದವು. ಅವುಗಳನ್ನೆಲ್ಲ ಮನಸಾರೆ ಆನಂದಿಸಿದ ಪ್ರೇಕ್ಷಕರಿಗೆ ಇದೀಗ ಕೊಂಚ ನಿರಾಸೆ. ಎಲ್ಲವೂ ಒಮ್ಮೆಲೇ ಭರ್ರನೆ ಮಳೆಬಂದಂತೆ ಮುಗಿದುಹೋದವಲ್ಲ ಎಂಬ ಬೇಸರ. ಇನ್ನೂ ಸ್ವಲ್ಪ ದಿನ ಆ ಸವಿಯನ್ನು ಸವಿಯಬೇಕಿತ್ತು ಎನ್ನುವ ಆಸೆ. ಅವರ ಆಸೆಗೆ ತಣ್ಣೀರೆರಚದಿರಲು ದಸರಾ ವಸ್ತು ಪ್ರದರ್ಶನ ಮುಂದಾಗಿದ್ದು ಪ್ರತಿದಿನವೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲಿದೆಯಂತೆ.

ಈ ಕುರಿತು ಮಾಹಿತಿ ಪಡೆಯಲು ಸಿಟಿಟುಡೆ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್ ಅವರನ್ನು ಸಂಪರ್ಕಿಸಿತು.

ವೇದಿಕೆಯಲ್ಲಿ ಏನೆpage-8-lead-photo-2ಲ್ಲ ಕಾರ್ಯಕ್ರಮಗಳನ್ನು ನೀಡುತ್ತಿದ್ದೀರಾ?

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಗುತ್ತಿದ್ದು, ಚಲನಚಿತ್ರ, ಟಿವಿ ಕಲಾವಿದರು ಆಗಮಿಸಿ ಮನರಂಜನೆ ನೀಡಲಿದ್ದಾರೆ. ನೃತ್ಯ, ಗಾಯನ, ಭರತನಾಟ್ಯ, ಕಂಸಾಳೆ, ಹಾಸ್ಯ, ಏಕಪಾತ್ರಾಭಿನಯ, ನಾಟಕ, ಜಾನಪದ ಕಲೆಗಳು ಪ್ರದರ್ಶನಗೊಳ್ಳಲಿವೆ.

ಶನಿವಾರ ಭಾನುವಾರ ಮಾತ್ರನಾ ಅಥವಾ..?

ವಾರದ ಎಲ್ಲ ದಿನಗಳಲ್ಲೂ ಕಾರ್ಯಕ್ರಮ ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ಮಾತ್ರ  ನಾಲ್ಕರಿಂದ ಐದು ವಿಶೇಷ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ .

ಪ್ರವೇಶ..?

ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.

ಬಿ.ವಿ.ಕಾರಂತ ರಂಗಮಂದಿರದಲ್ಲಿ ಕಲಾ ಪ್ರದರ್ಶನ ಯಾವಾಗಲೂ ಇರತ್ತಾ?

ದಸರಾ ಸಮಯದಲ್ಲಿ ಮಾತ್ರ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ. ಉಳಿದ ದಿನಗಳಲ್ಲಿ ಬೇರೆಯವರು ಬಾಡಿಗೆ ಕೇಳಿದರೆ ನೀಡಲಾಗುವುದು.

ಸ್ಥಳೀಯವಾಗಿ ಭಾಗವಹಿಸುವ ತಂಡಗಳು..?

ಪಟ್ಟಿ ಸಿದ್ಧಗೊpage-8-lead-photo-1ಳ್ಳುತ್ತಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ಸ್ಪಷ್ಟ ರೂಪು-ರೇಷೆ ಸಿಗಲಿದೆ.

ಪ್ರತಿದಿನ ಸಂಜೆ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳೂ ಅನಾವರಣಗೊಳ್ಳಲಿವೆ. ಅಕ್ಟೋಬರ್ 22ರ ಸಾಯಂಕಾಲ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದ್ದು, ಹಾಸ್ಯ ನಟರಾದ ಚಿಕ್ಕಣ್ಣ, ಮಂಡ್ಯ ರಮೇಶ್, ಸೃಜನ್ ಲೋಕೇಶ್  ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದ್ದು, ಇದೀಗ ಮೈಸೂರಿನ ಜನತೆ ಮತ್ತೊಮ್ಮೆ ಕಲಾರಸಗಳನ್ನು ಸವಿಯಬಹುದಾಗಿದೆ.

Leave a Reply

comments

Related Articles

error: