ಪ್ರಮುಖ ಸುದ್ದಿ

ಮದ್ಯ ಖರೀದಿಗೆ ಮುಗಿ ಬೀಳುತ್ತಿರುವ ಸಾರ್ವಜನಿಕರು

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಜು.೫: ಹೆದ್ದಾರಿಯಲ್ಲಿನ ಮದ್ಯದಂಗಡಿಗೆಗಳಿಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಬೇಗೂರಿನ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಸಗಟು ಮಾರಾಟ ಮಳಿಗೆಯಲ್ಲಿ ಮದ್ಯ ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ.
ತಾಲೂಕಿನಲ್ಲಿ ಹೆದ್ದಾರಿ ಬದಿಯಲ್ಲಿದ್ದ ೨೪ ಮಳಿಗೆಗಳನ್ನು ಮುಚ್ಚಿದ ಪರಿಣಾಮವಾಗಿ ಬೇಗೂರು ಹಾಗೂ ಬೊಮ್ಮಲಾಪುರದಲ್ಲಿರುವ ಮದ್ಯದಂಗಡಿಗಳಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ. ಕೇಂದ್ರಸ್ಥಾನದಲ್ಲಿರುವ ಬೇಗೂರಿನ ಎಂ ಎಸ್‌ಐಎಲ್ ಸಗಟು ಮಾರಾಟ ಮಳಿಗೆಯಲ್ಲಿ ಗರಿಷ್ಟ ಮಾರಾಟ ಬೆಲೆಗೆ ಉತ್ಪನ್ನಗಳು ದೊರೆಯುವುದರಿಂದ ಮದ್ಯಪ್ರಿಯರು ಇಲ್ಲಿ ಖರೀದಿಸಲು ಮುಗಿಬೀಳುತ್ತಿದ್ದಾರೆ. ಇಲ್ಲಿಗೆ ತಾಲೂಕಿನವರಲ್ಲದೆ ನಂಜನಗೂಡು ಹಾಗೂ ಹೆಗ್ಗಡದೇವನಕೋಟೆ ತಾಲೂಕಿನ ವಿವಿಧ ಗ್ರಾಮಗಳಿಂದಲೂ ಜನರು ದ್ವಿಚಕ್ರ ವಾಹನ, ಆಟೋ ಹಾಗೂ ಕಾರುಗಳಲ್ಲಿ ಬಂದು ಮುಗಿ ಬಿದ್ದು ಮದ್ಯ ಖರೀದಿಸುತ್ತಿದ್ದಾರೆ. ಇದರಿಂದ ಮಳಿಗೆಯ ಮುಂದೆ ಖರೀದಿದಾರರು ಸಾಲುಗಟ್ಟಿ ನಿಲ್ಲುತ್ತಿದ್ದು ಸಾರ್ವಜನಿಕರು ತಿರುಗಾಡಲೂ ಸಾಧ್ಯವಿಲ್ಲದಂತಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: